ಕಾಬೂಲ್: ನೀವ್ಯಾರೂ ದೇಶ ಬಿಟ್ಟು ಹೋಗಬೇಡಿ. ಅಪ್ಘಾನಿಸ್ತಾನದ ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂಬ ಮಾತುಗಳನ್ನು ತಾಲಿಬಾನಿಗಳು ಮೇಲೆಂದ ಮೇಲೆ ಹೇಳುತ್ತಲೇ ಇದ್ದಾರೆ. ಆದರೂ ಅಪ್ಘಾನಿಸ್ತಾನದಲ್ಲಿ ತೀವ್ರ ಹಿಂಸಾಚಾರಗಳು ನಡೆಯುತ್ತಲೇ ಇವೆ. ಸದ್ಯ ಅಪ್ಘನ್ ನಿರೂಪಕನಿಗೆ ತಾಲಿಬಾನಿಗಳು ಸ್ಟುಡಿಯೋಗೆ ನುಗ್ಗಿ ಬೆದರಿಕೆ ಹಾಕಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸುದ್ದಿ ವಾಹಿನಿಯ ಆ ನಿರೂಪಕನ ಸುತ್ತ 6-7 ಉಗ್ರರು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ‘ತಾಲಿಬಾನಿಗಳಿಗೆ ಹೆದರಬೇಡಿ ಎಂದು ನಿಮ್ಮ ಸುದ್ದಿ ವಾಹಿನಿ ಮೂಲಕ ಹೇಳು..ಇಸ್ಲಾಮಿಕ್ ಆಡಳಿತಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳು, ತಾಲಿಬಾನಿಗಳನ್ನು ಹೊಗಳು’ಎಂದು ನಿರೂಪಕನಿಗೆ ಗನ್ ತೋರಿಸಿ, ಬಲವಂತವಾಗಿ ಹೇಳಿಸಿದ್ದಾರೆ.
PublicNext
30/08/2021 03:59 pm