ಬೆಂಗಳೂರು: ಮೇಲ್ನೋಟಕ್ಕೆ ಅದು ನರ್ಸರಿಯಿಂದ ಸಸಿಗಳನ್ನು ಸಾಗಿಸುತ್ತಿರುವ ಲಾರಿ ಆದ್ರೆ ಸಸಿ ಕೆಳಗಿದ್ದ ಗಾಂಜಾ ಘಾಟು ವೈರಲ್ ಆಗಿದ್ದು ನಿಜಕ್ಕೂ ಶಾಕಿಂಗ್ ಸಂಗತಿ. ಬೆಂಗಳೂರು ವಲಯ ಎನ್ ಸಿಬಿ ಅಧಿಕಾರಿಗಳು ಒಟ್ಟು 21 ಕೋಟಿ ರೂ. ಮೌಲ್ಯದ 3400 ಕೆಜಿ ಗಾಂಜಾವನ್ನು ಪತ್ತೆ ಹಚ್ಚಿ ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.
ಒಟ್ಟು 131 ಗೋಣಿ ಚೀಲಗಳಲ್ಲಿ ಗಾಂಜಾ ಶೇಖರಿಸಿ ಸಾಗಾಟ ನಡೆಸುತ್ತಿದ್ದ ಸಿಂಧೆ, ಕಾಂಬ್ಳೆ ಮತ್ತು ಜೋಗದಂದ್ ಎಂಬುವರನ್ನು ಬಂಧಿಸಲಾಗಿದೆ. ಲಾರಿಯಲ್ಲಿ ಸಸಿಗಳ ರಾಶಿಯ ಕೆಳಗೆ ಮಣ್ಣಿನ ಜೊತೆ ಪ್ಲಾಸ್ಟಿಕ್ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರನ್ನು ಬಂಧಿಸಿರುವ ಪೊಲೀಸರು ಒಟ್ಟು 3400 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.
PublicNext
29/08/2021 09:11 pm