ಲಕ್ನೋ: ತಲಾಖ್ ನೀಡಿದ್ದಲ್ಲದೇ ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಪತಿಯ ನೀಚ ಕೃತ್ಯಕ್ಕೆ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮುಜಾಫರ್‌ನಗರ ಜಿಲ್ಲೆಯ ಕೃಷ್ಣನಗರ ನಿವಾಸಿ 25 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ನಾಲ್ಕು ವರ್ಷದ ಹಿಂದಷ್ಟೇ ಮಹಿಳೆಗೆ ಮದುವೆಯಾಗಿದ್ದು, 18 ತಿಂಗಳ ಮಗು ಇದೆ.
ಆರೋಪಿಯು ಮೂರು ತಿಂಗಳ ಹಿಂದಷ್ಟೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ. ಅಷ್ಟಕ್ಕೆ ಸುಮ್ಮನಿರ ಪಾಪಿಯು ಮಹಿಳೆಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ. ಇತ್ತೀಚೆಗೆ ಆಕೆಯ ಅಶ್ಲೀಲ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮುಜಾಫರ್‌ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ಪನ ಅಮಾನವೀಯ ಕೃತ್ಯದಿಂದ ಕಂದಮ್ಮ ಅನಾಥವಾಗಿದೆ.
PublicNext
29/08/2021 12:12 pm