ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಸ್ಸಾಂನಲ್ಲಿ ಉಗ್ರರ ಅಟ್ಟಹಾಸ.!- ಐವರ ಹತ್ಯೆ, ಕಲ್ಲಿದ್ದಲು ತುಂಬಿದ ಟ್ರಕ್​ಗಳಿಗೆ ಬೆಂಕಿ

ಗುವಾಹಟಿ: ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ (ಡಿಎನ್​ಎಲ್​ಎ) ಉಗ್ರರು ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಈ ದುರ್ಘಟನೆಯಲ್ಲಿ ಐವರು ಬಲಿಯಾಗಿದ್ದಾರೆ.

ಶಂಕಿತ ಉಗ್ರರ ಗುಂಡಿನ ದಾಳಿಯಲ್ಲಿ ಗೌರ್​ ಮಜುಂದಾರ್ ಎಂಬ ಟ್ರಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಉಗ್ರರು ಟ್ರಕ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಳಿಕ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಐವರ ಮೃತ ದೇಹವನ್ನು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

27/08/2021 10:05 am

Cinque Terre

59 K

Cinque Terre

0