ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಇಸ್ಪೀಟ್ ದಂಧೆ ಪ್ರಕರಣ, ಎಗ್ಗಿಲ್ಲದ ಜೂಜಾಟಕ್ಕೆ ನಮ್ಮ ಶ್ರೀರಕ್ಷೆ ಇಲ್ಲ : ಎಸ್ಪಿ ಜಿ ರಾಧಿಕಾ ಸ್ಪಷ್ಟನೆ.

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರು ಹಳೆಯ ವೀಡಿಯೋಗಳು ಎಂದು ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಜಿ. ರಾಧಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾರಿರುವ ಇಸ್ಪೀಟ್ ಧಂದೆಯ ವೀಡಿಯೋ ಹಳೆಯವು ಎಂದಿದ್ದಾರೆ. ನಮಗೆ ಮಾಹಿತಿ ಇರುವ ಪ್ರಕಾರ ಹಳೇ ವೀಡಿಯೋ ದೃಶ್ಯಗಳು ಎನ್ನಲಾಗಿದ್ದು, ನಾವು ಕೂಡ ನಾಲ್ಕು ತಂಡಗಳನ್ನು ರಚನೆ ಮಾಡಿ, ಜೂಜಾಟ ನಡೆಯುವ ಸ್ಥಳಗಳಿಗೆ ಭೇಟಿ ಪರೀಶೀಲನೆ ನಡೆಸಿದ್ದೆವೆ ಎಂದರು.

ನಾವು ಪರಿಶೀಶಿಲನೆಗೆ ಹೋದ ಸಂದರ್ಭದಲ್ಲಿ ಅಲ್ಲಿ ಯಾವ ಜೂಜಾಟವು ಕಂಡುಬಂದಿಲ್ಲ ಎಂದು ಹೇಳಿದರು. ಈಗಾಗಲೇ 2019 ರಿಂದ ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಜೂಜು ಪ್ರಕರಣಗಳನ್ನ ದಾಖಲಿಸಿ, ಕ್ರಮ ಕೈಗೊಳ್ಳಲಾಗಿದೆ. ಪರುಶುರಾಮಪುರದ ಓರ್ವ ಜೂಜುಕೋರನನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮಗಳಲ್ಲಿ ಬಿತ್ತರವಾದಂತೆ ಪೋಲಿಸರ ಶ್ರೀರಕ್ಷೆಯಲ್ಲಿ ಯಾವುದೇ ಅಕ್ರಮ ಜೂಜಾಟಗಳು ನಡೆದಿರುವುದಿಲ್ಲ, ಜೊತೆಗೆ ನಮ್ಮ ಇಲಾಖೆ ಯಾವುದೇ ಇಂತಹ ಪ್ರಕರಣಗಳಿಗೆ ಆಸ್ಪದ ನೀಡಿಲ್ಲ, ನೀಡುವುದು ಇಲ್ಲ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಕ್ರಮ ಜೂಜಾಟದ ಬಗ್ಗೆ ಮಾಹಿತಿ ಬಂದ ಕೂಡಲೇ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡಿದ್ದೆವೆ. 2019 ರಿಂದ 2021 ರ ಆಗಸ್ಟ್ ವರೆಗೆ ಬಹಳಷ್ಟು ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಟ್ಟು ಪೋಲಿಸ್ ಇಲಾಖೆ, ಜಿಲ್ಲಾ ಪೋಲಿಸ್ ಇಲಾಖೆ, ತಲೆ ತಗ್ಗಿಸುವಂತೆ ಮಾಡಿಲ್ಲ, ಮಾಡುವುದಿಲ್ಲ ಎಂದು ಖಡಕ್ ಸಂದೇಶ ನೀಡಿದರು. ಮುಂಬರುವ ದಿನಗಳಲ್ಲಿ ಇಲಾಖೆಯ ಕ್ರೈಂ ಮೀಟಿಂಗ್ ಗಳಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಒಂದು ವೇಳೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ ಅಕ್ರಮ ಜೂಜಾಟ ನಡೆದಿದೆ ಎಂದರೆ ಆ ಭಾಗದ ಪೋಲಿಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

Edited By : Shivu K
PublicNext

PublicNext

26/08/2021 10:53 am

Cinque Terre

66.61 K

Cinque Terre

0