ಫೈನಾನ್ಸ್ ಸಾಲ ಹಾಗೂ ಕೈ ಸಾಲಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ನಗರದ ಹಳಿಸಾಗರ ಬಡಾವಣೆಯಲ್ಲಿ ನಡೆದಿದೆ.
ಫೈನಾನ್ಸ್ ಗೆ ಸಾಲ ಕಟ್ಟಿ ಕಟ್ಟಿ ಸುಸ್ತಾಗಿದ್ದ ರೈತ ಬಡ್ಡಿ, ಚಕ್ರಬಡ್ಡಿಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿಂಗಪ್ಪ ಹಳೆಮನಿ (32) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿರುವ ನಿಂಗಪ್ಪ ಸುರಪುರ ತಾಲ್ಲೂಕಿನ ಮಂಗಳೂರಿನಲ್ಲಿರೋ ಬಸವೇಶ್ವರ ಫೈನಾನ್ಸ್ ನಲ್ಲಿ 50 ಸಾವಿರ ಸಾಲ ಪಡೆದಿದ್ದನು. ಅಲ್ಲದೇ ಕೈ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಿರಿಕಿರಿಗೆ ಬೇಸತ್ತು ಮೃತಪಟ್ಟಿದ್ದಾನೆ ಎಂದು ಹೇಳಲಾಗ್ತಿದೆ.
ಇನ್ನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ರೈತ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡಿ,ಮಗಳ ಜೀವನ ಉತ್ತಮವಾಗಿ ನಡೆಸಲು ಅನುಕೂಲ ಮಾಡಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು.ಅಲ್ಲದೇ ಸ್ಟೇಟಸ್ ನಲ್ಲಿ ತನ್ನ ಮಗಳಿಗೆ ತಾನು ಭೂ ಲೋಕ ಬಿಟ್ಟು ಹೋಗುತ್ತಿದ್ದೇನೆ ದಯವಿಟ್ಟು ಕ್ಷಮಿಸು ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಶಹಾಪುರ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
24/08/2021 02:37 pm