ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕತ್ತಲ ರಾತ್ರಿ ಮರಳು ಮಾಫಿಯಾ.. ಗ್ರಾಪಂ ಉಪಾಧ್ಯಕ್ಷ , ಸದಸ್ಯರ ದುರಾಸೆಯ ಕೈವಾಡ: ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರ ಆರೋಪ

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯ ಚಿಕ್ಕೋಡಿ ಭಾಗದಲ್ಲಿ ಎಗ್ಗಿಲ್ಲದೇ ದುರುಳರಿಂದ ಮರಳು ಮಾಪಿಯಾದಂತಹ ಅನೇಕ ವರದಿಗಳು ಈ ಹಿಂದೆ ಕೇಳಲ್ಪಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕುರಡುಜಾಣತನ ಪ್ರದರ್ಶನ ಮಾಡುತ್ತಲೇ ಬಂದಿದೆ.‌ ಈಗ ಅದರ ಪರಿಣಾಮವಾಗಿ ಬೇಲೆಯೆ ಎದ್ದು ಹೊಲ ಮೆದಂತೆ ಈಗ ಮರಳು ಮಾಪಿಯಾದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಮತ್ತು ಸದಸ್ಯರ ಶಾಮೀಲುಯಾಗಿರುವ ಆರೋಪ ಕೇಳಿ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹಿರೇಕುಡಿ ಗ್ರಾಮದಲ್ಲಿ ರಾತ್ರೋ ರಾತ್ರಿ ಟ್ರ್ಯಾಕ್ಟರಗಳಲ್ಲಿ ಖದಿಮರು ಮರಳು ತುಂಬಿಕೊಂಡು ಹೊಗಿತ್ತೊದ್ದು, ಮತ್ತೆ ತಲೆ ಎತ್ತಿದೆ ಮರಳು ಮಾಫಿಯಾ ದಂದೆ ಎಂದು‌ ಸ್ಥಳೀಯರು ಆರೋಪಿಸಿದ್ದಾರೆ.‌

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹಿರೇಕುಡಿ ಗ್ರಾಮದಲ್ಲಿ ಅಕ್ರಮ ಮರಳು ದಂತೆ ನಡೆಯುತ್ತಿರುವ ಬಗ್ಗೆ ಅಲ್ಲಿನ ಜನರು ಆರೋಪಿಸಿದ್ದಾರೆ. ‌ರಾತ್ರೋ ರಾತ್ರಿ ಎಲ್ಲರ ಕಣ್ಣು ತಪ್ಪಿಸಿ ಟ್ರ್ಯಾಕ್ಟರಗಳಲ್ಲಿ ಮರಳು ದಂದೆಗೆ ಕೈ ಹಾಕಿದ ಖದೀಮರ ಮೇಲೆ ಗ್ರಾಮಸ್ಥರು ದಾಳಿ ಮಾಡಿದ್ದಾರೆ. ‌

ಈ ವೇಳೆ ಗ್ರಾಮ ಪಂಚಾಯತಿಯ ಸದಸ್ಯ ಮತ್ತು ಉಪಾಧ್ಯಕ್ಷ ಗ್ರಾಮಸ್ಥರಿಗೆ ಧಮ್ಕಿ ಹಾಕಿ ನಮ್ಮನ್ನ ಯಾರು ಯಾವ ಸರಕಾರದವರು ಏನು ಮಾಡೊಕೆ ಆಗೊಲ್ಲವೆಂದು ಮರಳು ಮಾಪೀಯ ಅಡ್ಡಿಪಡಿಸಿದ ಗ್ರಾಮಸ್ಥರಿಗೆ ಧಮ್ಕಿ ಹಾಕಿದ್ದಾರಂತೆ.

ಹಳ್ಳದಲ್ಲಿನ ಮರಳನ್ನು ತೆಗೆಯುತ್ತಿದ್ದಾಗ ಟ್ಯಾಕ್ಟರ್ ಹಾಗೂ ಜೆ ಸಿ ಬಿ ತಡೆದಿರುವ ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯ ಶಂಕರ್ ಮಾಯನ್ನವರ ಹಾಗೂ ಉಪಾಧ್ಯಕ್ಷ ಭರತ ದೆವಡ್ಕರ ಅವರ ಕೈವಾಡ ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.‌

ಮರಳು ದಂದೆ ತಡೆಯುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

Edited By : Shivu K
PublicNext

PublicNext

17/08/2021 01:15 pm

Cinque Terre

51.16 K

Cinque Terre

1

ಸಂಬಂಧಿತ ಸುದ್ದಿ