ಮುಂಬೈ: ತಾನೇ ತಯಾರಿಸಿದ ಹೆಲಿಕಾಪ್ಟರ್‌ನಿಂದ ಯುವಕನೋರ್ವನ ಪ್ರಾಣ ಪಕ್ಷಿ ಹಾರಿದ ದುರ್ಘಟನೆ ಮಹಾರಾಷ್ಟ್ರದ ಯಾವತ್ಮಾಲ್ನಲ್ಲಿ ನಡೆದಿದೆ.
ಯವತ್ಮಾಲ್‌ನ ಶೇಖ್ ಇಸ್ಮಾಯಿಲ್ ಇಬ್ರಾಹೀಂ (24) ಮೃತ ಯುವಕ. 8ನೇ ತರಗತಿವರೆಗೆ ಓದಿ ನಂತರ ಶಾಲೆ ತೊರೆದಿದ್ದ ಶೇಖ್, ತ್ರೀ ಈಡಿಯಟ್ಸ್ ಸಿನಿಮಾದಿಂದ ಸ್ಫೂರ್ತಿಗೊಂಡು, ಕಳೆದ 3 ವರ್ಷದಿಂದ ಸ್ವಂತ ಸಿಂಗಲ್ ಸೀಟರ್ ಕಾಪ್ಟರ್ ತಯಾರಿಕೆಯಲ್ಲಿ ತೊಡಗಿದ್ದ. ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ನಿರ್ಧರಿಸಿದ್ದರು.
ಶೇಖ್ ಇಸ್ಮಾಯಿಲ್ ಮಂಗಳವಾರ ರಾತ್ರಿ ಟೆಸ್ಟ್ ಮಾಡಲು ಮುಂದಾಗಿ ಫೈಲಟ್ ಸೀಟ್‌ನಲ್ಲಿ ಕುಳಿತುಕೊಂಡು ಎಂಜಿನ್ ಸ್ಟಾರ್ಟ್ ಮಾಡಿದಾಗ ಅಳವಡಿಕೆ ಮಾಡಿದ್ದ ರೆಕ್ಕೆ ಕತ್ತರಿಸಿದೆ. ಆ ರೆಕ್ಕೆಯ ಚೂರೊಂದು ನೇರವಾಗಿ ಪೈಲಟ್‌ನ ಕ್ಯಾಬಿನ್‌ನೊಳಗೆ ಕುಳಿತಿದ್ದ ಶೇಖ್‌ರವರ ಕತ್ತನ್ನು ಸೀಳಿಕೊಂಡು ಹೋಗಿದೆ. ಪರಿಣಾಮ ಶೇಖ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
PublicNext
13/08/2021 01:00 pm