ಮಧುರೈ : ಅವರಿಬ್ಬರು ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದರು. ಮದುವೆಯಾದ ಎರಡೇ ದಿನಕ್ಕೆ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಗ್ಲಾಡಿಸ್ ರಾಣಿ (20) ಕೊಲೆಯಾದ ದುರ್ದೈವಿ ಆಗಸ್ಟ್ 2 ರಂದು ಜೋತಿಮನಿ ಎಂಬುವನ ಜೊತೆ ಗ್ಲಾಡಿಸ್ ರಾಣಿ ವಿವಾಹ ನಡೆದಿತ್ತು. ಮದುವೆಗೂ ಮುಂಚೆನೇ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆಗಸ್ಟ್ 4 ರಂದು ಈ ಜೋಡಿ ಹೊರಗೆ ಹೋಗಿತ್ತು. ಮನೆಗೆ ಜೋತಿಮನಿ ಒಬ್ಬನೆ ವಾಪಾಸ್ ಬಂದಿದ್ದ. ಹೆಂಡತಿ ಎಲ್ಲಿ ಅಂತಾ ಕೇಳಿದ ಮನೆಯವರಿಗೆ, ಆಕೆ ಸ್ನೇಹಿತೆಯನ್ನು ಭೇಟಿಯಾಗಲು ತೆರಳಿದ್ದಾಗಿ ಸುಳ್ಳು ಹೇಳಿದ್ದ.
ಆಗಸ್ಟ್ 7 ರಂದು ಮಧುರೈನ ಹೊರ ರಸ್ತೆಯ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಗ್ಲಾಡಿಸ್ ರಾಣಿಯ ಮೃತ ದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ ಜೋತಿ ಮಣಿ ಕೂಡ ಆಗಸ್ಟ್ 5 ರಂದು ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಆದರೆ, ಆತನ ನಡುವಳಿಕೆ ಮೇಲೆ ಅನುಮಾನ ಪಟ್ಟ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಗೆ ಕಾರಣವೇನು ?
ಗ್ಲಾಡಿಸ್ ರಾಣಿಯ ಮನೆಯವರ ಬಲವಂತಕ್ಕೆ ನಾನು ಆಕೆಯನ್ನು ಮದುವೆಯಾದೆ ಮದುವೆಯ ಮುಂಚೆನೇ ಆಕೆ 4 ತಿಂಗಳ ಗರ್ಭಿಣಿಯಾಗಿದ್ದಳು. ಅವಳ ಗರ್ಭಕ್ಕೆ ನಾನು ಕಾರಣ ಅಲ್ಲ. ಅದಕ್ಕಾಗಿಯೇ ಮದುವೆಯಾಗಲು ನಿರಾಕರಿಸಿದ್ದೆ. ಆಗಸ್ಟ್ 4 ರಂದು ಮನೆಯಿಂದ ಹೊರಗೆ ಹೋದಾಗ ಇದೆ ವಿಚಾರಕ್ಕೆ ಗಲಾಟೆ ನಡೆಯಿತು. ಕೋಪ ತಾರಕಕ್ಕೇರಿದಾಗ ಆಕೆಯನ್ನು ಕೊಲೆ ಮಾಡಿ ಬೀಸಾಕಿದೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
PublicNext
09/08/2021 07:37 pm