ಬೀದರ್: ಅಕ್ರಮವಾಗಿ ಸಾಗಿಸುತ್ತಿದ್ದ 59.20 ಲಕ್ಷ ರೂ. ಮೌಲ್ಯದ 592 ಗಾಂಜಾ ಜಪ್ತಿ ಮಾಡಿರುವ ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಸಂತಪುರ ಠಾಣೆ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಓಂಕಾರ್, ಅನಿಲ್ಕುಮಾರ್, ಹಾಜಿಪಾಶಾ, ಅಸ್ಲಾಂ ಬಂಧಿತ ಆರೋಪಿಗಳು. ಇವರು ಹೈದರಾಬಾದ್ನಿಂದ ಕಮಲನಗರ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದು, ಈ ವರ್ಷದ ದಾಖಲೆ ಎನಿಸಿದೆ. ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ತೆಲಂಗಾಣ ಪಾಸಿಂಗ್ ಹೊಂದಿದ TS -12 UD-1094 ಟೆಂಪೋದಲ್ಲಿ ಔರಾದ ತಾಲೂಕಿನ ವಡಗಾಂವ್- ಕಂದಗೋಳ ರಸ್ತೆ ಪಕ್ಕದ “ಶಿವಾ ಫಂಕ್ಷನ್ ಹಾಲ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ರೈಡ್ ಮಾಡಲಾಗಿದೆ. ದಾಳಿಯಲ್ಲಿ ಗಾಂಜಾ ಸಾಗಾಟಕ್ಕೆ ಬಳಕೆ ಮಾಡಲಾದ ಟೆಂಪು ಸೇರಿ ಒಟ್ಟು 64,20,000 ರುಪಾಯಿ ಮೌಲ್ಯದ ವಸ್ತುವನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಓಂಕಾರ, ಕೋನಮೇಳಕುಂದಾ ಗ್ರಾಮದ ಅನೀಲಕುಮಾರ್, ಭಾಲ್ಕಿ ಕಮಲನಗರದ ಹಾಜಿ ಪಾಶಾ ಹಾಗೂ ಭಾಲ್ಕಿ ಪಟ್ಟಣದ ಜನತಾ ನಗರದ ಅಸ್ಲಂನನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
08/08/2021 11:13 pm