ಬೆಂಗಳೂರು : ಡಾಮಿನೋಸ್ ನಲ್ಲಿ ಯುವತಿ ಮೇಲೆ ಮ್ಯಾನೇಜರ್ ಹಲ್ಲೆ ಪ್ರಕರಣ ಸಂಬಂಧ ಮ್ಯಾನೇಜರ್ ಪುರುಷೋತ್ತಮ್ ನನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಡಾಮಿನೋಸ್ ನಲ್ಲಿ ಕೆಲಸ ಮಾಡ್ತಿದ್ದ ಯುವತಿಯನ್ನ ಲವ್ ಮಾಡುವಂತೆ ಪೀಡಿಸುತ್ತಿದ್ದ ಮ್ಯಾನೇಜರ್ ಪುರುಷೋತ್ತಮ್. ಬೇರೆ ಹುಡಗರ ಜೊತೆ ಮಾತಾಡಬಾರದು,ಯಾರ ಜೊತೆಯಲ್ಲಿಯೂ ವಾಟ್ಸಾಪ್ ಚಾಟ್ ಮಾಡಬಾರದು ಅಂತ ಯುವತಿಯ ಮೊಬೈಲ್ ಚೆಕ್ ಮಾಡ್ತಿದ್ದ.ಇದೇ ರೀತಿ ಪದೇ ಪದೇ ಯುವತಿಗೆ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇನ್ನೂ ಈ ಯುವತಿ ಮತ್ತೊಬ್ಬ ಯುವಕನನ್ನ ಲವ್ ಮಾಡುತ್ತಿರುವುದು ತಿಳಿದು ಯುವತಿ ಮೇಲೆ ಹಲ್ಲೆ ಮಾಡಿದ್ದ.
ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವರದಿ ಬೆನ್ನಲ್ಲೆ ಸ್ಥಳಕ್ಕೆ ಭೇಟಿ ನೀಡಿ, ಸುಮೋಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಬಸವನಗುಡಿ ಪೊಲೀಸರು ಐಪಿಸಿ 323 ಹಲ್ಲೆ, 354 ಲೈಂಗಿಕ ಕಿರುಕುಳ, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
08/08/2021 11:46 am