ಬೆಳಗಾವಿ(ಕಿತ್ತೂರು): ತಾಲೂಕಿನ ಬೈಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನರ್ಸ್ ಗೆ ವ್ಯಾಕ್ಸಿನೇಷನ್ ನೆಪದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ನರ್ಸ್ ಹಾಗೂ ಸಂಬಂಧಿಕರು ಇಲ್ಲಿನ ದೇವಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬುಧವಾರ ಸಾಯಂಕಾಲ ನಡೆದಿದೆ.
ನರ್ಸ್ ಕಿತ್ತೂರು ಸಮೀಪದ ಬೈಲೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ತವ್ಯದ ಮೇಲೆ ದೇವಗಾಂವ ಗ್ರಾಮಕ್ಕೂ ಆಗಾಗ ತೆರಳುತ್ತಿದ್ದರು. ಇದೆ ವೇಳೆ ಗ್ರಾಮದ ಮುಖ್ಯಶಿಕ್ಷಕನಾಗಿದ್ದರಿಂದ ನರ್ಸನ್ನು ಪರಿಚಯವಾಗಿದೆ.
ಕಿತ್ತೂರು ತಾಲೂಕು ಪ್ರಧಾನ ಗುರುಗಳ ಸಂಘದ ಅಧ್ಯಕ್ಷರೂ ಆಗಿರುವ ಮುಖ್ಯಶಿಕ್ಷಕ ಸುರೇಶ ಚವಲಗಿ, ನರ್ಸ್ ಮೊಬೈಲ್ ನಂಬರ್ ಪಡೆದು ಕೆಲ ದಿನಗಳಿಂದ ಅಶ್ಲೀಲ್ ಮೆಸೆಜ್ ಕಳುಹಿಸುತ್ತಿದ್ದ. ಈ ವಿಷಯವನ್ನು ನರ್ಸ್ ತನ್ನ ಸಂಬಂಧಿಕರಿಗೆ ತಿಳಿಸಿದ್ದರು. ಮುಖ್ಯಶಿಕ್ಷಕನ ವರ್ತನೆಯಿಂದ ಆಕ್ರೋಶಗೊಂಡ ನರ್ಸ್ ಪತಿ ಹಾಗೂ ಸಂಬಂಧಿಕರು ಇಂದು ಶಾಲೆಗೆ ಆಗಮಿಸಿ, ಮುಖ್ಯಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿದರು. ಅಶ್ಲೀಲ ಪದಗಳಿಂದ ವಾಗ್ದಾಳಿ ನಡೆಸಿದರು.
ಮುಖ್ಯಶಿಕ್ಷಕನನ್ನು ನರ್ಸ್ ಹಾಗೂ ಸಂಬಂಧಿಕರು ಥಳಿಸುತ್ತಿರುವ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ಕಿತ್ತೂರು ತಾಲೂಕು ಪ್ರಧಾನ ಗುರುಗಳ ಸಂಘದ ಅಧ್ಯಕ್ಷರೂ ಆಗಿರುವ ಮುಖ್ಯಶಿಕ್ಷಕ ಸುರೇಶ ಚವಲಗಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ ಕೂಡಲೇ
ಘಟನೆಗೆ ಸಂಬಂಧಿಸಿದಂತೆ ತಾಲೂಕು ಬಿಇಒ ಕೂಡಾ ಇಲಾಖೆಯ ಮೇಲಾಧಿಕಾರಿಗಳ ಗಮಕ್ಕೆ ತಂದು ಸೂಕ್ತವಾದ ಕ್ರಮ ಕೈಗೊಳ್ಳುತ್ತೆನೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ
PublicNext
05/08/2021 01:58 pm