ಯಾದಗಿರಿ: ಆಸ್ಪತ್ರೆಯೊಳಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್ ಮೇಲೆ ದುಷ್ಕರ್ಮಿಗಳ ಹಲ್ಲೆ ಮಾಡಿರೋ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಬೈಕ್ ನಿಲ್ಲಿಸಬೇಡ ಎಂದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಮಹ್ಮದ್ ಶೆಫಿ ಮೇಲೆ ಗ್ಯಾಂಗ್ ಒಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಂಬುಲೆನ್ಸ್ ತೆರಳುವ ಮಾರ್ಗದಲ್ಲಿ ಮಂಜುನಾಥ ಎಂಬಾತ ಬೈಕ್ ನಿಲ್ಲಿಸಿದ್ದ. ಬೈಕ್ ನಿಲ್ಲಿಸಿದರೆ ಅಂಬುಲೆನ್ಸ್ ತೆರಳಲು ಸಮಸ್ಯೆಯಾಗುತ್ತದೆ.
ದಯವಿಟ್ಟು ಬೈಕ್ ನಿಲ್ಲಿಸಬೇಡ ಎಂದು ಸೆಕ್ಯುರಿಟಿ ಗಾರ್ಡ್ ಮನವಿ ಮಾಡಿದ್ದರು. ಆದರೆ, ಮಂಜುನಾಥ ಕೋಪಗೊಂಡು ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಆಗಮಿಸಿ, ಆಸ್ಪತ್ರೆಯೊಳಗೆ ನುಗ್ಗಿ ಸೆಕ್ಯುರಿಟಿ ಗಾರ್ಡ್ ಹಲ್ಲೆ ಮಾಡಿದ್ದಾನೆ.
ಇನ್ನು ಈ ಘಟನೆ ಇದೆ ತಿಂಗಳು 3ರಂದು ನಡೆದಿದ್ದು, ಹಲ್ಲೆ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಲ್ಲದೇ ನಿನ್ನೆ ಸರ್ಕಾರಿ ಆಸ್ಪತ್ರೆ ಮುಂದೆ ಸಿಬ್ಬಂದಿ ಸೇರಿಕೊಂಡು ನ್ಯಾಯ ನೀಡುವಂತೆ ಪ್ರತಿಭಟನೆ ಮಾಡಿದ್ದರು.
ಇನ್ನು ಆರೋಪಿ ಮಂಜುನಾಥನನ್ನ ಶಹಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಟ್ ಯಾದಗಿರಿ
PublicNext
05/08/2021 10:59 am