ಬೆಂಗಳೂರು: ಜನ್ಮ ದಿನದಂದು ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಲಹಂಕದ ಸಹಕಾರ ನಗರದಲ್ಲಿ ನಡೆದಿದೆ.
ಬಾಲಕಿ ಕಳೆದೊಂದು ವಾರದಿಂದಲೇ ಹೊಸ ಬಟ್ಟೆ ಕೊಡಿಸುವಂತೆ ಬಾಲಕಿ ಪೋಷಕರಿಗೆ ಒತ್ತಾಯ ಮಾಡಿದ್ದಳು. ಆದರೆ ಪೋಷಕರು ಆಕೆಯ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಾಳೆ ಬರ್ತ್‌ಡೇ ಇದೆ ನನಗೆ ಬಟ್ಟೆ ಬೇಕು ಎಂದು ಬಾಲಕಿ ಇಂದು ಸಹ ಜಗಳ ಆರಂಭಿಸಿದ್ದಳು. ಆದರೆ ಪೋಷಕರು ಬಾಲಕಿಗೆ ಬೈದು, ಕೆಲಸಕ್ಕೆಂದು ಹೊರಗಡೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆದರೆ ಮತ್ತೊಂದು ಮಾಹಿತಿ ಪ್ರಕಾರ, ಬಾಲಕಿಯು ಕೆಲ ತಿಂಗಳಿಂದ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಹುಡುಗ ಸಹ ಇಷ್ಟಪಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿದಿದ್ದು, ಬಳಿಕ ಅದೇ ಹುಡುಗನ ಜೊತೆ ಮದುವೆ ಮಾಡುವಂತೆ ಪೋಷಕರನ್ನು ಕೇಳಿದ್ದಳಂತೆ. ಆದರೆ ಪೋಷಕರು ಆ ಹುಡುಗ ನಿನಗೆ ಅಣ್ಣನ ವರಸೆ ಆಗಬೇಕು. ಹೀಗಾಗಿ ಮದುವೆ ಮಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಕಾರಣಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಕೊಡುಗೆಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
PublicNext
01/08/2021 10:45 pm