ನವದೆಹಲಿ: ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿದ ಪೊಲೀಸ್ ಕಾನ್ಸ್ಟೆಬಲ್ ನನ್ನು ಅರೆಸ್ಟ್ ಮಾಡಲಾಗಿದೆ. ಹಾಗೂ ಈ ಬಗ್ಗೆ ಕೇಸ್ ದಾಖಲಾಗದಂತೆ ನೋಡಿಕೊಂಡಿದ್ದ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಇತ್ತೀಚಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಘಟನೆ ನಡೆದಿತ್ತು. ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪೊಲೀಸಪ್ಪನ ಈ ಅಮಾನುಷ ಕೃತ್ಯಕ್ಕೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು. ಹಲ್ಲೆಗೈದ ಕಾನ್ಸ್ಟೆಬಲ್ನನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆ ನಡೆಯುತ್ತಿದೆ ಎಂದು ಪೂರ್ವ ದೆಹಲಿ ಡಿಸಿಪಿ ಪ್ರಿಯಾಂಕಾ ಕಶ್ಯಪ್ ತಿಳಿಸಿದ್ದಾರೆ.
ಈ ಪೊಲೀಸ್ ಕಾನ್ಸ್ಟೆಬಲ್ ವ್ಯಕ್ತಿಯೊಬ್ಬನಿಗೆ ತುಂಬ ಥಳಿಸಿದ್ದ. ಪೊಲೀಸ್(Police) ಹೊಡೆತ ತಾಳಲಾಗದೆ ಆತ ಮೃತಪಟ್ಟಿದ್ದ. ಈ ವೇಳೆ ಕಾನ್ಸ್ಟೆಬಲ್ ಜತೆ ಇನ್ನೂ ನಾಲ್ವರು ಇದ್ದರು. ನಂತರ ಎಲ್ಲ ಸೇರಿ ಆತನ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ ಮೀರತ್ ಕಾಲುವೆಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ಮೃತ ವ್ಯಕ್ತಿಯ ಸಂಬಂಧಿಕರು ದೂರು ನೀಡಲು ಪೊಲೀಸ್ ಠಾಣೆಯಲ್ಲಿ 24 ಗಂಟೆ ಕಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ನಂತರ ವಿಡಿಯೋ ವೈರಕ್ ಆಗ್ತಾ ಇದ್ದಂತೆ ದೂರು ದಾಖಲಾಗಿದ್ದು ಆರೋಪಿ ಪೊಲೀಸ್ ಕಾನ್ಸ್ಟೇಬಲ್ ನನ್ನು ಅರೆಸ್ಟ್ ಮಾಡಿದ ಹಿರಿಯ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
PublicNext
29/07/2021 10:23 pm