ಬೆಂಗಳೂರು: ನಗರದ ಬಾಣಸವಾಡಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ರೌಡಿಶೀಟರ್ ಹರೀಶ್ ಎಂಬಾತನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳನ್ನು ಕರೆಸಿ ಪೊಲೀಸರು ವಾರ್ನ್ ಮಾಡುತ್ತಿದ್ದಾರೆ. ಇಂದು ಹರೀಶ್ ನನ್ನು ಬಾಣಸವಾಡಿ ಪೊಲೀಸ್ ಠಾಣೆಗೆ ಕರೆಸಿ, ಯಾವುದೇ ರೌಡಿ ಚಟುವಟಿಕೆ ಗಳಲ್ಲಿ ಭಾಗಿಯಾದಂತೆ ವಾರ್ನ್ ಮಾಡಿ ಹೊರ ಕಳುಹಿಸಿದ್ರು. ಇದೇ ಟೈಂ ಗೆ ಕಾದಿದ್ದ ರೌಡಿಗಳ ಗುಂಪೊಂದು, ಕಾರಿನಲ್ಲಿ ಬಂದು ಏಕಾಏಕಿ ಪೊಲೀಸ್ ಠಾಣಾ ಪಕ್ಕದಲ್ಲೇ ಹರೀಶ್ ಅಟ್ಯಾಕ್ ಮಾಡಿದ್ದಾರೆ. ಪೊಲೀಸ್ ಸ್ಟೇಷನ್ ಹತ್ತಿರವೇ ಭೀಕರ ಕೊಲೆಯಾಗಿದ್ದು ಪೊಲೀಸರಿಗೆ ಮತ್ತಷ್ಟು ತಲೆ ಬಿಸಿ ಮಾಡಿದಂತಾಗಿದೆ.
PublicNext
28/07/2021 06:18 pm