ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

4 ದಿನದ ಹಿಂದೆ ಮನೆಬಿಟ್ಟು ಓಡಿಹೋಗಿದ್ದ ಪ್ರೇಮಿಗಳು ಕಾಡಿನಲ್ಲಿ ಶವವಾಗಿ ಪತ್ತೆ

ಹಾವೇರಿ: ನಾಲ್ಕು ದಿನಗಳ ಹಿಂದೆ ಮನೆಬಿಟ್ಟು ಓಡಿಹೋಗಿದ್ದ ಪ್ರೇಮಿಗಳು ಕಾಡಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ವಾಟರ್ ಟ್ಯಾಂಕ್ ಹತ್ತಿರ ನಡೆದಿದೆ.

ನೇತ್ರಾ ಬಾಳಿಕಾಯಿ (17) ಹಾಗೂ ಪ್ರವೀಣ ಬಾಗಿಲದ (24) ಮೃತಪಟ್ಟ ಪ್ರೇಮಿಗಳು. ಮೃತ ದೇಹಗಳ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಹೀಗಾಗಿ ಈ ಜೋಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇದು ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ಪೋಲಿಸರ ತನಿಖೆಯಿಂದಲೇ ಪತ್ತೆಯಾಗಬೇಕಿದೆ.

ನೇತ್ರಾ ಹಾಗೂ ಪ್ರವೀಣ ಜೋಡಿಯು ಐದಾರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಓಡಿ ಹೋಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Vijay Kumar
PublicNext

PublicNext

28/02/2021 05:12 pm

Cinque Terre

80.54 K

Cinque Terre

5

ಸಂಬಂಧಿತ ಸುದ್ದಿ