ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

70 ರೂ. ಕಾಂಡೋಮ್‌ಗಾಗಿ 3.10 ಲಕ್ಷ ಕಳೆದುಕೊಂಡ.!

ಪಾಟ್ನಾ: ವ್ಯಕ್ತಿಯೊಬ್ಬ 70 ರೂಪಾಯಿ ಕಾಂಡೋಮ್ ಖರೀದಿಸಲು ಹೋಗಿ 3.10 ಲಕ್ಷ ರೂ. ಕಳೆದುಕೊಂಡ ಘಟನೆ ಬಿಹಾರದ ಭಾಗಲ್ಪುರ್‌ನಲ್ಲಿ ನಡೆದಿದೆ.

ಸಂತ್ರಸ್ತ ವ್ಯಕ್ತಿಯು ಭಾಗಲ್ಪುರದ ಬೆಲ್‌ ಟವರ್‌ ಬಳಿ ತಮ್ಮ ಸ್ಕೂಟಿ ನಿಲ್ಲಿಸಿ ಕಾಂಡೋಮ್ ತರಲು ಸಮೀಪದ ಮೆಡಿಕಲ್ ಶಾಪ್‌ಗೆ ಹೋಗಿದ್ದ. ಆದರೆ ಮರಳಿ ಬಂದು ನೋಡಿದಾಗ ಸ್ಕೂಟಿಯಲ್ಲಿಯೇ ಕೀ ಬಿಟ್ಟು ಹೋಗಿರುವುದನ್ನು ನೋಡಿ ಶಾಕ್ ಆದರು. ತಕ್ಷಣವೇ ಸೀಟ್‌ ತೆರೆದು ನೋಡಿದಾಗ ಅದರಲ್ಲಿದ್ದ 3.10 ಲಕ್ಷ ಹಣ ಕಳುವಾಗಿದ್ದು ಗಮನಕ್ಕೆ ಬಂದಿದೆ. ಇದರಿಂದ ಕಂಗಾಲದ ವ್ಯಕ್ತಿ ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದ ಕೊಟ್ವಾಲಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಮೆಡಿಕಲ್ ಶಾಪ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೆ ಘಟನಾ ಸ್ಥಳದಲ್ಲಿರುವ ಬಿಎಸ್‌ಎನ್‌ಎಲ್ ಕ್ಯಾಂಪಸ್‌ನ ಸಿಸಿಟಿವಿ ಫುಟೇಜ್ ಪಡೆದು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

28/02/2021 02:19 pm

Cinque Terre

68.87 K

Cinque Terre

3

ಸಂಬಂಧಿತ ಸುದ್ದಿ