ವಿಜಯಪುರ: ಸಿಗರೇಟ್ ಹೊಗೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿ ಫೆಬ್ರವರಿ 22ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸತೀಶ್ ಬೂದಿಹಾಳ ಮತ್ತು ಈಶ್ವರ್ ಸವದಿ ಸಿಗರೇಟ್ ಸೇದಿ ದಿಲೀಪ್ ಚವ್ಹಾಣ್, ಮಹಾಂತೇಶ್ ಚವ್ಹಾಣ್ ಮುಂದೆ ಹೊಗೆ ಬಿಟ್ಟಿದ್ದಾರೆ. ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ದಾಬಾದಲ್ಲಿ ಗಲಾಟೆ ನಡೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿಲೀಪ್ ಹಾಗೂ ಮಹಾಂತೇಶ್ ದೂರು ನೀಡಲೆಂದು ಠಾಣೆಗೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ಬಿಜೆಪಿ ಮುಖಂಡ ರಮೇಶ್ ಮಸಬಿನಾಳ, ತಾವು ರಾಜೀ ಸಂಧಾನ ಮಾಡಿಸುವುದಾಗಿ ಹೇಳಿ ಇಬ್ಬರನ್ನೂ ಠಾಣೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ದಿಲೀಪ್ ಮತ್ತು ಮಹಾಂತೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಅಲ್ಲಿಗೆ ಬಂದ ಆರು ಜನರಿದ್ದ ಗುಂಪು ಪೈಪ್, ಕೋಲು, ಕ್ಯಾನ್ ಬಳಸಿ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಆಸ್ಪತ್ರೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಇಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
PublicNext
27/02/2021 11:33 am