ಅಲಪ್ಪುಳ: ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಕೇರಳದ ಅಲಪ್ಪುಳದಲ್ಲಿ ಎಸ್ ಡಿಪಿಐನ 6 ಜನರನ್ನು ಬಂಧಿಸಲಾಗಿದೆ.
ಚೆರ್ತಲಾದ ಬಳಿ ಇರುವ ನಾಗಮಕುಲಂಗರದಲ್ಲಿ ಎರಡು ಗುಂಪಿನ ನಡುವೆ ಉಂಟಾದ ಘರ್ಷಣೆಯ ನಂತರ ನಂದು (23) ಎಂಬ ಯುವಕನನ್ನು ಹತ್ಯೆ ಮಾಡಿರುವ ಆರೋಪ ಎಸ್ ಡಿಪಿಐ ವಿರುದ್ಧ ಕೇಳಿಬಂದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಘರ್ಷಣೆಯಲ್ಲಿ ಎಸ್ ಡಿಪಿಐ ಹಾಗೂ ಆರ್ ಎಸ್ ಎಸ್ ನ 6 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಅಲಪ್ಪುಳ, ಎರ್ನಾಕುಲಮ್ ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಮತ್ತೋರ್ವ ಆರ್ ಎಸ್ಎಸ್ ನ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಾರ್ಯಕರ್ತನ ಸಾವಿಗೆ ಆಕ್ರೋಶಗೊಂಡಿರುವ ಬಿಜೆಪಿ, ಹಿಂಸಾಚಾರವನ್ನು ಖಂಡಿಸಿ ಬಂದ್ ಗೆ ಕರೆ ನೀಡಿದೆ.
PublicNext
25/02/2021 01:06 pm