ಚಿಕ್ಕಮಗಳೂರು: ಒಂದೇ ಜಾಗದಲ್ಲಿ 250 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕ್ಷಣ ಕ್ಷಣಕ್ಕೂ ಕುರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಕುರಿಗಾಯಿಗಳಲ್ಲಿ ಆತಂಕ ಹೆಚ್ಚಾಗಿದೆ.
ತುಮಕೂರು ಜಿಲ್ಲೆಯ ಶಿರಾ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕುರಿಗಾಯಿಗಳು ಕುರಿಗಳನ್ನು ಹೊಡೆದುಕೊಂಡು ಕಡೂರಿನ ಎರೆಹಳ್ಳಿ, ಹುಲ್ಲೇಹಳ್ಳಿ, ಮೇಲೆಹಳ್ಳಿಗೆ ಬಂದಿದ್ದರು. ಆದರೆ ಕಡೂರಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕುರಿಗಳು ತೀವ್ರವಾಗಿ ನೆನೆದಿದ್ದವು. ಮಂಗಳವಾರ ಬೆಳಗ್ಗೆಯಿಂದಲೂ ಆಗಾಗ್ಗೆ ಒಂದು-ಎರಡು, ಮೂರು-ನಾಲ್ಕು ಕುರಿಗಳು ಸಾವನ್ನಪ್ಪಿ ಸಂಜೆ ವೇಳೆಗೆ ಸುಮಾರು 250 ಕುರಿಗಳು ಸಾವನ್ನಪ್ಪಿವೆ.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಕುರಿಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
PublicNext
24/02/2021 07:57 am