ದಕ್ಷಿಣ ಆಫ್ರಿಕಾ: ಪ್ರೇಮಿಗಳ ದಿನದಂದು ತಮ್ಮ ಬಾಳ ಸಂಗಾತಿಗೆ ವಿಶೇಷ ಉಡುಗೊರೆ ಕೊಡುತ್ತಾರೆ. ಆದರೆ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತನ್ನ ಪತಿಗೆ ಜಿರಾಫೆ ಹೃದಯ ಗಿಫ್ಟ್ ನೀಡಿ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
32 ವರ್ಷದ ಮೆರೆಲೈಸ್ ವ್ಯಾನ್ ಡೆರ್ ಮೆರ್ವೆ ತನ್ನ ಪತಿಗಾಗಿ ಜಿರಾಫೆಯನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲದೆ ಮೃತ ಜಿರಾಫೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ರಕ್ತಸಿಕ್ತ ಜಿರಾಫೆ ಹೃದಯ ಹಿಡಿದುಕೊಂಡು ಫೋಟೋಗಳಿಗೆ ಫೋಸ್ ನೀಡಿರುವ ವ, ಅವುಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ನೋಡಿದ ಪ್ರಾಣಿ ಪ್ರಿಯರು ಪ್ರಾಣಿ ಹಂತಕಿ ಮೆರ್ವೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಮೆರ್ವೆಗೆ ಮೊದಲಿನಿಂದಲೂ ಪ್ರಾಣಿ ಬೇಟೆಯಾಡುವುದು ಹವ್ಯಾಸವಂತೆ. ಆನೆ, ಚಿರತೆ, ಹುಲಿ ಸೇರಿದಂತೆ ಇದುವರೆಗೂ ಸುಮಾರು 500ಕ್ಕೂ ಹೆಚ್ಚು ಕಾಡು ಪ್ರಾಣಿಗಳ ಹತ್ಯೆ ಮಾಡಿದ್ದಾಳೆ. ಫೆ. 14 ರಂದು ತನ್ನ ಪತಿಗೆ ಉಡುಗೊರೆ ನೀಡುವ ಉದ್ದೇಶದಿಂದ 17 ವರ್ಷದ ಕಪ್ಪು ಜಿರಾಫೆಯ ಪ್ರಾಣ ತೆಗೆದಿದ್ದಾಳೆ. ಅದರ ಹೃದಯ ಬಗೆದು ಗಂಡನಿಗೆ ಗಿಫ್ಟ್ ಮಾಡಿದ್ದಾಳೆ.
PublicNext
24/02/2021 07:21 am