ಬೆಳಗಾವಿ: ಹೊಲದಲ್ಲಿ ಸರಸ ಸಲ್ಲಾಪ ನಡೆಸಿದ್ದ ವಿವಾಹಿತೆ, ಪ್ರಿಯಕರನನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಶಿಕ್ಷೆ ನೀಡಿದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ನಡೆದಿದೆ.
ಮಹಿಳೆಯು ಕುಟುಂಬಸ್ಥರ ಕಣ್ಣು ತಪ್ಪಿಸಿ ಗೆಳೆಯನನ್ನು ಸೇರುತ್ತಿದ್ದಳು. ಈ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಹಿಂಬಾಲಿಸಿದ ಕುಟುಂಬಸ್ಥರು ಹೊಲಕ್ಕೆ ತೆರಳಿದ್ದಾರೆ. ಈ ವೇಳೆ ಮಹಿಳೆಯು ಗೆಳೆಯ ಜೊತೆಗೆ ಸರಸ ನಡೆಸಿದ್ದರು. ಇಬ್ಬರನ್ನೂ ಹಿಡಿದ ಕುಟುಂಬಸ್ಥರು ಟ್ರ್ಯಾಕ್ಟರ್‌ಗೆ ಕಟ್ಟಿ ಥಳಿಸಿದ್ದಾರೆ. ಮುಂದೆ ಹೀಗೆ ಮಾಡದಂತೆ ಎಚ್ಚರಿಸಿದ್ದಾರೆ.
ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
20/02/2021 06:47 pm