ಬೆಂಗಳೂರು: ಮೆಡಿಕಲ್-ಇಂಜಿನಿಯರಿಂಗ್ ಸೀಟ್ ಗೋಲ್‌ಮಾಲ್ ಸಂಬಂಧಿಸಿದಂತೆ ನಡೆದ IT ದಾಳಿ ಬಗ್ಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. ರಾಜ್ಯಾದ್ಯಂತ 9 ಶಿಕ್ಷಣ ಸಂಸ್ಥೆಗಳ ಮೇಲೆ IT ದಾಳಿ ನಡೆದಿದ್ದು 56 ಬೇರೆ ಬೇರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ, ಮೆಡಿಕಲ್ ಸೀಟ್, ಇಂಜಿನಿಯರಿಂಗ್ ಸೀಟ್ ಸ್ಕ್ಯಾಮ್ ಸಹ ಬಯಲಾಗಿದ್ದು ಬ್ರೋಕರ್ಸ್ ಜೊತೆ ಸೇರಿ ಶಿಕ್ಷಣ ಸಂಸ್ಥೆಗಳಿಂದ ಅಕ್ರಮ ನಡೆದಿರುವುದಾಗಿ ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದೆ. ಇತ್ತ, IT ರೇಡಲ್ಲಿ 30 ಕೋಟಿ ಮೌಲ್ಯದ 81 ಕೆ.ಜಿ ಚಿನ್ನ ಸೀಜ್ ಆಗಿದೆ. ಹಾಗಾಗಿ, ಬಹುಕೋಟಿ ತೆರಿಗೆ ವಂಚನೆ ಪತ್ತೆ ಹಚ್ಚಿದ IT ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. ಸದ್ಯ, 15 ಕೋಟಿ 90 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಚಿನ್ನಾಭರಣ, ವಜ್ರ ಸೇರಿ 41 ಕೆ.ಜಿ ಬೆಳ್ಳಿ ಆಭರಣವನ್ನು ಜಪ್ತಿ ಮಾಡಲಾಗಿದೆ.
PublicNext
19/02/2021 08:58 am