ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್‌ಗೆ ನುಗ್ಗಿ ಚಾಕು ತೋರಿಸಿ ಎಣ್ಣೆ ಎತ್ತಾಕೊಂಡು ಹೋದ

ಬೆಂಗಳೂರು: ಹಾಡಹಗಲೇ ಬಾರ್‌ಗೆ ನುಗ್ಗಿ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿಯೊಬ್ಬ 25 ಸಾವಿರ ನಗದು, 6 ಸಾವಿರ ರೂ. ಮೌಲ್ಯದ ಮದ್ಯದ ಬಾಟಲ್​​ ಹೊತ್ತೊಯ್ದಿದ್ದಾನೆ. ‌ಬಂಡೇಪಾಳ್ಯ ನಿವಾಸಿ ಬಾರ್ ಮಾಲೀಕ ಮನೋಹರ್ ಎಂಬುವವರು ನೀಡಿದ ದೂರಿನ ಆಧಾರದ ಮದನ್ ಕುಮಾರ್ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜ.31ರಂದು ಬೆಳಗ್ಗೆ 11.45ರಲ್ಲಿ ಸಹಚರರೊಂದಿಗೆ ಬಾರ್‌ಗೆ ನುಗ್ಗಿದ ಆರೋಪಿ ಮದನ್ ಕುಮಾರ್ ಸಿಬ್ಬಂದಿಗೆ ಚೂರಿ ತೋರಿಸಿ, ‘ನಿನ್ನ ಅಂಗಡಿಯಲ್ಲಿ ಇರುವ ನಗದು ಹಣ ಕೊಡುವಂತೆ ಬೆದರಿಸಿದ್ದ’. ಬಾರ್‌ನಲ್ಲಿದ್ದ ಕ್ಯಾಶ್ ಡ್ರಾಯರ್‌ಗೆ ಕೈ ಹಾಕಿ 25 ಸಾವಿರ ರೂ., 6 ಸಾವಿರ ರೂ. ಮೌಲ್ಯದ ಮದ್ಯದ ಬಾಟಲ್​ ತೆಗೆದುಕೊಂಡು ಹೋಗಿದ್ದ.

‘ಈ ವಿಚಾರ ಏನಾದರೂ ಪೊಲೀಸರಿಗೆ ತಿಳಿಸಿದರೆ 6 ತಿಂಗಳಲ್ಲಿ ಜೈಲಿನಿಂದ ಬಂದು ನಿನಗೊಂದು ಗತಿ ಕಾಣಿಸುತ್ತೇನೆ’ ಎಂದು ಮಹನೋಹರ್‌ಗೆ ಆರೋಪಿ ಬೆದರಿಸಿದ್ದ. ಇದೀಗ ಬೇಗೂರು ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Edited By : Nagaraj Tulugeri
PublicNext

PublicNext

15/02/2021 01:58 pm

Cinque Terre

79.25 K

Cinque Terre

2