ಬೆಂಗಳೂರು: ವೈವಾಹಿಕ ಜೀವನದಲ್ಲಿ ಕೌಟುಂಬಿಕ ಕಲಹಗಳು ಬರುವುದು ಸಾಮಾನ್ಯ ಆದ್ರೆ ಇಲ್ಲೊಬ್ಬ ಮಹಿಳೆ ಇದೇ ಕಾರಣಕ್ಕೆ ಬದುಕಿರುವ ಗಂಡನ ಡೆತ್ ಸರ್ಟಿಫಿಕೆಟ್ ಪಡೆದಿದ್ದಾಳೆ. ಹೌದು ಪತಿ ಮೃತಪಟ್ಟಿದ್ದಾರೆ ಎಂದು ಅವರ ಮರಣ ಪ್ರಮಾಣ ಪತ್ರ ಮಾಡಿಸಿಕೊಂಡು “ವಿಧವಾ ವೇತನ’ ಪಿಂಚಣಿ ಪಡೆದಿರುವ ಪ್ರಕರಣ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪತ್ನಿ ಈ ಕಾರ್ಯ ಕಂಡ ಪತಿ ಶಾಕ್ ಆಗಿ ಪತ್ನಿ ವಿರುದ್ಧ ದೂರು ನೀಡಿದ್ದಾರೆ. ಭಾಸ್ಕರ್ ಎಂಬುವವರು ನೀಡಿರುವ ದೂರಿನ ಅನ್ವಯ ಆತನ ಪತ್ನಿ ಸುಜಾತಾ ಹಾಗೂ ಮತ್ತಿತರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾಸ್ಕರ್ ಹಾಗೂ ಸುಜಾತಾ ಅವರಿಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವೈಮನಸ್ಸು ಉಂಟಾಗಿತ್ತು. ಹೀಗಾಗಿ, ಎರಡು ವರ್ಷದ ಹಿಂದೆ ಭಾಸ್ಕರ್ ಮನೆ ಬಿಟ್ಟು ಹೋಗಿದ್ದು ಪುನಃ ವಾಪಸ್ ಆಗಿರಲಿಲ್ಲ. ಇದೇ ಸಮಯದಲ್ಲಿ ಪತಿ ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ಸುಜಾತಾ ಅವರು ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಕಲಿ ದಾಖಲೆಗಳನ್ನು ನೀಡಿದ್ದಾರೆ.
ಅಷ್ಟೇ ಅಲ್ಲದೆ ಭಾಸ್ಕರ್ ಮೃತಪಟ್ಟಿರುವುದಾಗಿ ಮರಣ ಪ್ರಮಾಣ ಪತ್ರವನ್ನು 2019ರಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಸರ್ಕಾರದಿಂದ ಸಿಗುವ ವಿಧವಾ ವೇತನ ಪಿಂಚಣಿಯನ್ನೂ ಸಹ ಒಂದುವರ್ಷಕ್ಕೂ ಅಧಿಕ ಕಾಲ ಪಡೆದುಕೊಂಡಿದ್ದಾರೆ.
PublicNext
06/02/2021 02:31 pm