ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರದಕ್ಷಿಣೆ ಕಿರುಕುಳ: ದೂರು ದಾಖಲಿಸಿದ IPS ಅಧಿಕಾರಿ ವರ್ತಿಕಾ ಕಟಿಯಾರ್

ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿ ಹಾಗು ಮಾಜಿ ಧಾರವಾಡ SP ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. 2009ರ ಬ್ಯಾಚ್ ನ ಐಎಫ್ ಎಸ್ ಅಧಿಕಾರಿ ನಿತಿನ್ ಹಾಗೂ ವರ್ತಿಕಾ ಕಟಿಯಾರ್ 2011ರಲ್ಲಿ ವಿವಾಹ ಆಗಿದ್ದರು. ನಿತಿನ್ ಕೊಲಂಬೋ ಸಹಿತ ವಿವಿಧ ದೇಶಗಳ ರಾಯಭಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ವರ್ತಿಕಾ ಅವರು 2010ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿದ್ದು, ಪ್ರಸ್ತುತ ಕೆಎಸ್ ಆರ್ ಪಿ ಸಂಶೋಧನ ಹಾಗೂ ತರಬೇತಿ ಕೇಂದ್ರದಲ್ಲಿ ಸೇವೆಯಲ್ಲಿದ್ದಾರೆ.

ಪತಿ ನಿತಿನ್ ಸುಭಾಶ್, ಅವರ ತಾಯಿ, ಸಹೋದರ, ಸೇರಿ ಕುಟುಂಬಸ್ಥರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ಪತಿಗೆ ಕುಡಿಯುವ ಮತ್ತು ಧೂಮಪಾನ ಮಾಡುವ ಅತಿಯಾದ ಚಟವಿದೆ. ಇದನ್ನು ಬಿಡುವಂತೆ ಹಲವು ಬಾರಿ ಹೇಳಿದಾಗಲು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು ಎಂದು ವರ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿತಿನ್ ಸುಭಾಶ್ ಸಹಿತ ಒಟ್ಟು 7 ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವ ಬೆದರಿಕೆ, ವಂಚನೆ ಆರೋಪಗಳ ಅನ್ವಯ ಎಫ್ ಐಆರ್ ದಾಖಲಾಗಿದೆ.

Edited By : Nirmala Aralikatti
PublicNext

PublicNext

06/02/2021 12:43 pm

Cinque Terre

119.47 K

Cinque Terre

27

ಸಂಬಂಧಿತ ಸುದ್ದಿ