ದಾವಣಗೆರೆ: ಶಿವಮೊಗ್ಗದ ಹುಣಸೋಡು ಕ್ವಾರಿಗಳಿಗೆ ಜಿಲ್ಲೆಯ ಜಗಳೂರು ತಾಲೂಕಿನ ತಾಯಿಟೋಣಿ ಗ್ರಾಮದಿಂದ ಸ್ಫೋಟಕಗಳನ್ನು ಸಾಗಣೆ ಮಾಡಲಾಗಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವವಲಯ ಐಜಿಪಿ ರವಿ, ಎಸ್ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಯಲ್ಲಿ ಸ್ಪೋಟಕ ಸಂಗ್ರಹಿಸಿರುವ ಶಂಕೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಇಲಾಖೆಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಜಗಳೂರು ತಾಲೂಕಿನ ತಾಯಿಟೊಣಿ ಗ್ರಾಮಕ್ಕೆ ಭೇಟಿ ನೀಡಿದ ಪೂರ್ವ ವಲಯ ಐಜಿಪಿ ಎಸ್ ರವಿ ಅವರು, ಎಸ್ಪಿ ಹನುಮಂತರಾಯ ಅವರಿಗೆ ಪ್ರಕರಣ ಗಂಭೀರವಾಗಿ ಪರಿಗಣಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತಾಯಿಟೋನಿ ಗ್ರಾಮದ ಹೊರವಲಯದಲ್ಲಿರುವ ಎರಡು ಮನೆಗಳಲ್ಲಿ ಆಂಧ್ರ ಪ್ರದೇಶ ಮೂಲದ ಎರಡು ಲಾರಿಗಳು ನಿಂತಿದ್ದು, ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.
ಹೀಗಾಗಿ ಇಲ್ಲಿ ಸ್ಪೋಟಕ ಸಂಗ್ರಹಿಸಿ ಕಲ್ಲಿನ ಕ್ವಾರೆಗಳಿಗೆ ಸ್ಪೋಟಕ್ಕೆ ನೀಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಶಿವಮೊಗ್ಗದ ಹುಣಸೋಡು ಸ್ಫೋಟಕ್ಕೆ ತಾಯಿಟೋಣಿಯಿಂದ ಸ್ಫೋಟಕಗಳು ಸಾಗಿಸಲಾಗಿತ್ತಾ ಅಥವಾ ಇಲ್ಲಿ ಎಲ್ಲೆಲ್ಲಿ ಕಲ್ಲಿನ ಕ್ವಾರಿಗಳಿವೆ. ಎಲ್ಲೆಲ್ಲಿ ಸ್ಪೋಟಕ ಬಳಸಲಾಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಐಜಿಪಿ ಎಸ್ ರವಿ ಸೂಚನೆಯನ್ನು ನೀಡಿದ್ದಾರೆ.
PublicNext
04/02/2021 02:52 pm