ದಾವಣಗೆರೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.
ತಾಯಿ ಕಮಲಮ್ಮ, ಮಗ ಸಂಜಯ್, ಮಗಳು ಶೃತಿ ಆತ್ಮಹತ್ಯೆ ಮಾಡಿಕೊಂಡವರು. ಚನ್ನಗಿರಿ ಬಳಿಯ ಸೂಳೆಕೆರೆ ಕಾಲುವೆಗೆ ಬಿದ್ದು ಮೂವರು ಸಾವಿಗೆ ಶರಣಾಗಿದ್ದರು.
24 ವರ್ಷದ ಶೃತಿ ತಮ್ಮ 21 ವರ್ಷದ ಸಂಜಯ್, ತಾಯಿ ಕಮಲಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಶೃತಿ ಹಾಗೂ ಸಂಜಯ್ ಶವಗಳು ದೊರೆತಿವೆ. ಕಮಲಮ್ಮ ನ ಮೃತದೇಹಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶೃತಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯ ಕುಟುಂಬದ ಸದಸ್ಯರ ನಡುವೆ ಮನಸ್ತಾಪವಿತ್ತು. ಆತ್ಮಹತ್ಯೆಗೆ ಮದುವೆ ವಿಚಾರವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
29/01/2021 05:03 pm