ಹೈದರಾಬಾದ್ : 'ಆಗಂತುಕ' ಸಿನಿಮಾ ರೀತಿಯಲ್ಲಿಯೇ ನೈಜ ಘಟನೆವೊಂದು ಹೈದರಾಬಾದ್ ನಲ್ಲಿ ನಡೆದಿದೆ. ಹೌದು ತೆರೆ ಮೇಲೆ ಬಂದ ಆಗಂತುಕ ಸಿನಿಮಾದಲ್ಲಿ ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿ ಎಲ್ಲ ಮಹಿಳೆಯರೂ ಹೀಗೆ ಎಂದು ಭಾವಿಸಿ ಕೊಲೆ ಮಾಡಿ ವಿಕೃತ ಸಂತೋಷ ಅನುಭವಿಸುತ್ತಾನೆ. ಈ ಸಿನಿಮಾ ನೆನಪಿಸುವ ಘಟನೆ ಹೈದರಾಬಾದ್ ನ ರಾಚಗೊಂಡದಲ್ಲಿ ನಡೆದಿದೆ.
ಹೌದು 18 ಮಹಿಳೆಯರನ್ನು ಹತ್ಯೆಗೈದ ಆರೋಪದಡಿಯಲ್ಲಿ ಹೈದರಾಬಾದ್ ಪೊಲೀಸರು 45 ವರ್ಷದ 45 ವರ್ಷದ ಮೈನಾ ರಾಮುಲು ಎಂಬ ವ್ಯಕ್ತಿಯನ್ನು ಮಂಗಳವಾರ (ಜ.26) ಬಂಧಿಸಿದ್ದಾರೆ.18 ಮಹಿಳೆಯರ ಸರಣಿ ಕೊಲೆ ಮಾತ್ರವಲ್ಲದೆ ಇತರ ಅಪರಾಧ ಕೃತ್ಯದಲ್ಲೂ ಈತ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲು ಕ್ವಾರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ 21 ವರ್ಷವಿರುವಾಗಲೇ ವಿವಾಹವಾಗಿದ್ದ. ಆದರೇ ಮದುವೆಯಾದ ಕೆಲದಿನಗಳಲ್ಲೆ ಈತನ ಪತ್ನಿ ಬೇರೆಯವರನ್ನು ವರಿಸಿದ್ದಳು. ಇದರಿಂದ ಮಹಿಳೆಯರ ಮೇಲೆ ದ್ವೇಷ ಸಾಧಿಸುತ್ತಿದ್ದ ಆರೋಪಿ ಸರಣಿ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತನಿಖೆಯ ನಂತರ ತಿಳಿಸಿದ್ದಾರೆ.
ಹದಿನಾರು ಮಹಿಳೆಯರ ಕೊಲೆಗಳು, ನಾಲ್ಕು ಆಸ್ತಿಪಾಸ್ತಿ ಸಂಬಂಧಿ ಪ್ರಕರಣ ಹಾಗೂ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪ್ರಕರಣಗಳು ಈತನ ಮೇಲಿದ್ದವು. ಮೋಸ್ಟ್ ವಾಂಟೆಡ್ ಕೈದಿಯಾಗಿದ್ದ ಈತನನ್ನು ಬಂಧಿಸಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ನಂತರ ಈತನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದಲೂ ಪರಾರಿಯಾಗಿದ್ದ. ಮತ್ತೆ ಬಂಧಿಸಲಾಗಿತ್ತು. ಆನಂತರ ತೆಲಂಗಾಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮನವಿ ಮೇರೆಗೆ ಕಳೆದ ಜುಲೈನಲ್ಲಿ ಈತನ ಬಿಡುಗಡೆಯಾಗಿತ್ತು.
ಮಹಿಳೆಯರನ್ನು ಹಣದ ಆಮಿಷ ಒಡ್ಡಿ ಕರೆಸಿಕೊಂಡು ಅವರೊಂದಿಗೆ ಮದ್ಯ ಸೇವಿಸಿ ನಂತರ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಅವರ ಬಳಿ ಇದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
27/01/2021 11:56 am