ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ಕಿರುಕುಳ: ಗಣರಾಜ್ಯೋತ್ಸವದಂದೇ ನೌಕರ ಆತ್ಮಹತ್ಯೆಗೆ ಯತ್ನ

ಬೀದರ್ : ಚಿಟಗುಪ್ಪ ಪುರಸಭೆ ಪೌರಕಾರ್ಮಿಕನೊಬ್ಬ ಸಂಬಳ ವಿಚಾರವಾಗಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಪುರಸಭೆ ಎದುರಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಣರಾಜ್ಯೋತ್ಸವ ದಿನವೇ ನಡೆದಿದೆ. ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಮಾಹಿತಿ ಇದೆ.

ಕಳೆದ ಕೆಲ ತಿಂಗಳಿಂದ ಸಂಬಳಕ್ಕಾಗಿ ಮುಖ್ಯಾಧಿಕಾರಿ ಹಾಗೂ ಇತರೆ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸುತ್ತಿರುವ ಬಗ್ಗೆ ಸಿಬ್ಬಂದಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಒಂದು ಕಡೇ ಸೇರಿದ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿಗಳ ಸಮುಖದಲ್ಲಿ ಈ ಘಟನೆ ನಡೆದಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Edited By : Nagaraj Tulugeri
PublicNext

PublicNext

26/01/2021 03:01 pm

Cinque Terre

84.17 K

Cinque Terre

3

ಸಂಬಂಧಿತ ಸುದ್ದಿ