ಉತ್ತರ ಪ್ರದೇಶ: ಲಖನೌ ಹೊರವಲಯದಲ್ಲಿನ ಶಿವಪುರಿ ಗ್ರಾಮದಲ್ಲಿನ ದೇವಸ್ಥಾನದ ಆವರಣದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅರ್ಚಕನ ಮೃತದೇಹ ಪತ್ತೆಯಾಗಿದ್ದು, ಜನರು ಭಯಭೀತರಾಗಿದ್ದಾರೆ. ಫಕೀರ್ ದಾಸ್ (80) ಮೃತ ಅರ್ಚಕ. ಬಿಕೆಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇಗುಲದ ವಸ್ತುಗಳು ಅಥವಾ ಕಾಣಿಕೆ ಹುಂಡಿಯಲ್ಲಿನ ಹಣ ಯಾವುದೂ ಕಳ್ಳತನವಾಗಿಲ್ಲ. ಹೀಗಾಗಿ ಅರ್ಚಕನ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಲಖನೌ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ.
PublicNext
21/01/2021 03:47 pm