ಭುವನೇಶ್ವರ: ಮಹಿಳೆಯೊಬ್ಬಳು ತನ್ನ ಮಗಳ ಹತ್ಯೆಗಾಗಿ 50 ಸಾವಿರ ರೂ. ಸುಪಾರಿ ನೀಡಿದ ಆಘಾತಕಾರಿ ಘಟನೆಯೊಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
58 ವರ್ಷದ ಸುಕಿರಿ ಗಿರಿ ತನ್ನ ಮಗಳು ಶಿಬಾನಿ ನಾಯಕ್ (36)ಗೆ ಸುಪಾರಿ ನೀಡಿ ಹತ್ಯೆ ಮಾಡಿಸಿ ಪೊಲೀಸರ ಅತಿಥಿಯಾಗಿದ್ದಾಳೆ. ಸುಕಿರಿ ಗಿರಿ ಆರೋಪಿಗಳಾದ ಪ್ರಮೋದ್ ಜೀನಾ (32) ಸೇರಿದಂತೆ ಮತ್ತಿಬ್ಬರಿಗೆ 50 ಸಾವಿರ ರೂ. ಸುಪಾರಿ ನೀಡಿದ್ದಾಳೆ. ಈ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿಬಾನಿ ನಾಯಕ್ ಅಕ್ರಮವಾಗಿ ಮದ್ಯ ವ್ಯಾಪಾರ ನಡೆಸುತ್ತಿದ್ದಳು. ಇದನ್ನು ಕೈಬಿಡುವಂತೆ ಅನೇಕ ಬಾರಿ ಸುಕಿರಿ ತನ್ನ ಮಗಳಿಗೆ ತಿಳಿಸಿದ್ದಾಳೆ. ಆದರೆ ತಾಯಿಯ ಮಾತನ್ನು ಶಿಬಾನಿ ಕೇಳುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ಸುಕುರಿ, ಪ್ರಮೋದ್ ಜಿನಾನನ್ನು ಭೇಟಿ ಮಾಡಿ ಮಗಳನ್ನು ಕೊಲ್ಲಲು ಸುಪಾರಿ ನೀಡುವುದಾಗಿ ಒಪ್ಪಿಕೊಂಡಿದ್ದಾಳೆ. ಇತ್ತ ಸುಪಾರಿ ಪಡೆದಿದ್ದ ಆರೋಪಿಗಳು ಜನವರಿ 12ರಂದು ನಾಗ್ರಾಮ್ ಗ್ರಾಮದ ಸೇತುವೆಯ ಬಳಿ ಶಿಬಾನಿ ನಾಯಕ್‌ಳನ್ನು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಕೊಲೆಗೈದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪ್ರವಾಶ್ ಪಲ್ ಹೇಳಿದ್ದಾರೆ.
PublicNext
18/01/2021 03:42 pm