ನವದೆಹಲಿ: ಆನ್‌ಲೈನ್ ಕ್ಲಾಸ್ ವಾಟ್ಸಾಪ್ ಗ್ರೂಪ್‌ಗೆ ವಿದೇಶಗಳಲ್ಲಿ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿದ್ದ ಬಗ್ಗೆ ಕೇಳಿದ್ದೇವು, ಕೆಲ ವಿಡಿಯೋಗಳನ್ನು ನೋಡಿದ್ದು ಉಂಟು. ಆದರೆ ಇಂತಹದ್ದೇ ಒಂದು ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಹೌದು. 5ನೇ ತರಗತಿಯ ವಿದ್ಯಾರ್ಥಿಯ ಪೋಷಕರು ತಮ್ಮ ಮಗುವಿನ ಆನ್‌ಲೈನ್ ಕ್ಲಾಸ್ ವಾಟ್ಸಾಪ್ ಗ್ರೂಪ್‌ನಲ್ಲಿ ಪೋರ್ನ್ ವಿಡಿಯೋ ಹಂಚಿಕೊಂಡಿದ್ದಾರೆ. ಇದರಿಂದಾಗಿ ಉತ್ತರ ದೆಹಲಿ ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯು ಅಸಮಾಧಾನ ಹೊರ ಹಾಕಿದೆ. "ಆನ್‌ಲೈನ್ ತರಗತಿಗಳ ಉದ್ದೇಶಕ್ಕಾಗಿ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ. ಇಂತಹ ಅಶ್ಲೀಲ ಫೋಟೋ, ವಿಡಿಯೋವನ್ನು ಗ್ರೂಪ್‌ನಲ್ಲಿ ಹಂಚಿಕೊಂಡರೆ ಎಫ್‌ಐಆರ್ ದಾಖಲಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದೆ.
PublicNext
11/01/2021 11:18 am