ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

71 ರ ವೃದ್ದೆ ಮೇಲೆ ರೇಪ್ : 31 ರ ಯುವಕ ಅರೆಸ್ಟ್

ಬೆಂಗಳೂರು : ಒಬ್ಬಂಟಿಯಾಗಿದ್ದ ವೃದ್ಧೆಗೆ ಚಿಕ್ಕ ಪುಟ್ಟ ಸಹಾಯ ಮಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ ಯುವಕ ಮಾಡಬಾರದ್ದನ್ನು ಮಾಡಿದ್ದ.

ಹೌದು ಜನವರಿ 2 ರಂದು ಮುಖ್ಯ ದ್ವಾರದ ಗ್ಲಾಸ್ ಒಡೆದು ಒಳಗೆ ನುಗ್ಗಿ, ಕೊಠಡಿಯಲ್ಲಿ ಮಲಗಿದ್ದ 71 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿದ ಜ್ಯೂಲಿರೋಸ್ (31) ಎಂಬಾತ ಸಂತ್ರಸ್ತೆಯ ಮನೆಯಲ್ಲಿ ಕೆಲ ಸಮಯದಿಂದ ಬಾಡಿಗೆಗೆ ಇದ್ದ.

ಘಟನೆ ಬಳಿಕ ವೃದ್ಧೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Edited By : Nirmala Aralikatti
PublicNext

PublicNext

05/01/2021 10:53 am

Cinque Terre

65.97 K

Cinque Terre

4