ಹೈದರಾಬಾದ್: 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಗಳ ಪತಿಯನ್ನು ಆಕೆಯ ಕುಟುಂಬಸ್ಥರೇ ಹೊಡೆದು ಕೊಂದ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.
ಆ್ಯಡಂ ಸ್ಮಿತ್ ಎಂಬಾತನೇ ಕೊಲೆಯಾದ ದುರ್ದೈವಿ. ಈತ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. 6 ತಿಂಗಳ ಹಿಂದಷ್ಟೇ ಮಹೇಶ್ವರಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ.
ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ದರಿಂದ ಯುವತಿ ಮನೆಯವರು ಮದುವೆಗೆ ವಿರೋಧಿಸಿದ್ದರು. ಹೀಗಾಗಿ ನವಜೋಡಿ ಅದೋನಿ ಪಟ್ಟಣದ ಕೃಷ್ತಪ್ಪ ನಗರದಲ್ಲಿ ವಾಸವಿದ್ದರು. ಮದುವೆಗೆ ಒಪ್ಪದ ಯುವತಿ ಮನೆಯವರು ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ಮತ್ತು ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
PublicNext
02/01/2021 04:32 pm