ನವದೆಹಲಿ: ಡೀಸೆಲ್ ಬದಲಿಗೆ ನೀರು ತುಂಬಿ ವಂಚನೆಗೆ ಯತ್ನಿಸಿದ ಪರಿಣಾಮ 8 ವಾಹನಗಳು ಮಾರ್ಗಮಧ್ಯೆ ಕೆಟ್ಟು ನಿಂತ ಘಟನೆ ಮಸ್ಕಿಯಲ್ಲಿ ನಡೆದಿದೆ.
ಮಸ್ಕಿ ಕನಕವೃತ್ತದಲ್ಲಿನ ಸೂಪರ್ ಪಿಲ್ಲಿಂಗ್ ಸ್ಟೇಷನ್‌ನ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ವಾಹನ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ಲಾರಿ ಚಾಲಕರೊಬ್ಬರು 10 ಸಾವಿರ ರೂ. ಡೀಸೆಲ್ ಹಾಕಿದ್ದರು. ಆದರೆ ಲಾರಿ ಮಾರ್ಗ ಮಧ್ಯೆ ಕೆಟ್ಟು ನಿಂತಿದೆ. ಈ ವೇಳೆ ಡೀಸೆಲ್ ಟ್ಯಾಂಕ್ ತೆಗೆದು ನೋಡಿದಾಗ ನೀರು ತುಂಬಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಅನೇಕ ವಾಹನಗಳಿಗೆ ನೀರು ತುಂಬಲಾಗಿದ್ದು, ಪರಿಣಾಮ ಮೂರು ಲಾರಿ, ಮೂರು ಟ್ರ್ಯಾಕ್ಟರ್ ಹಾಗೂ ಎರಡು ಕಾರುಗಳು ಮಾರ್ಗಮಧ್ಯೆ ಕೆಟ್ಟು ನಿಂತಿವೆ.
ಕೋಪಗೊಂಡ ವಾಹನ ಚಾಲಕರು ಪೆಟ್ರೋಲ್ ಬಂಕ್‌ಗೆ ಬಂದು ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡ ಬಂಕ್ ಮಾಲೀಕರು ನೀರು ತುಂಬಿದ ಪರಿಣಾಮ ಕೆಟ್ಟುನಿಂತ ವಾಹನಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
PublicNext
31/12/2020 10:31 am