ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕನ್ ಸಾಂಬಾರ್ ಗಾಗಿ ಕಿರಿಕ್ ಕೊಲೆಯಲ್ಲಿ ಅಂತ್ಯ..!

ಶ್ರೀಮಂಗಲ: ಇತ್ತಿಚ್ಚೆಗೆ ಸಹನೆ ಸಮಾಧಾನ ಎನ್ನುವುದು ಮರೆಯಾಗುತ್ತಿದ್ದು ಕ್ಷುಲಕ ಕಾರಣಕ್ಕಾಗಿ ಕೊಲೆಗಳು ನಡೆಯುತ್ತಿವೆ.

ಸದ್ಯ ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮದ ತೋಟದಲ್ಲಿ ಸೋಮವಾರ ರಾತ್ರಿ ಕಾರ್ಮಿಕರ ನಡುವೆ ಊಟದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ನಂಜನಗೂಡು ತಾಲೂಕಿನ ಕೊತ್ತನಹಳ್ಳಿಯ ಕುಮಾರ್ ದಾಸ (25) ಕೊಲೆಯಾದ ಕಾರ್ಮಿಕ. 17 ವರ್ಷದ ಹುಡುಗ ಕೊಲೆ ಆರೋಪಿಯಾಗಿದ್ದು, ಕುಟ್ಟ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಇಬ್ಬರೂ 25 ದಿನಗಳ ಹಿಂದೆ ಮಹೇಶ್ ಅವರ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡು ಒಟ್ಟಾಗಿ ವಾಸಿಸುತ್ತಿದ್ದರು.

ಸೋಮವಾರ ರಾತ್ರಿ ಊಟ ಮಾಡುವ ಸಂದರ್ಭ ಚಿಕನ್ ಸಾಂಬಾರ್ ಬಡಿಸುವ ವಿಚಾರದಲ್ಲಿ ಜಗಳ ನಡೆದು ಆರೋಪಿಯು ಬ್ಯಾಟ್ ಹಾಗೂ ಸೌದೆಯಿಂದ ಕುಮಾರ್ ದಾಸ ಅವರ ತಲೆಗೆ ಹೊಡೆದಿದ್ದಾನೆ.

ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

30/12/2020 07:33 am

Cinque Terre

89.69 K

Cinque Terre

2

ಸಂಬಂಧಿತ ಸುದ್ದಿ