ಲಕ್ನೋ: ಹಾಡಹಗಲೇ 23 ವರ್ಷದ ಯುವಕನನ್ನು ಇಬ್ಬರು ವ್ಯಕ್ತಿಗಳು ನಡು ರಸ್ತೆಯಲ್ಲೇ ಥಳಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಲೋನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತ ಯುವಕನನ್ನು ಅಜಯ್ ಎಂದು ಗುರುತಿಸಲಾಗಿದ್ದು, ಈ ಘಟನೆಯನ್ನು ದಾರಿಹೋಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳಾದ ಗೋಮಿಂದ್ ಶರ್ಮಾ(21) ಮತ್ತು ಆತನ ಸ್ನೇಹಿತ ಅಮಿತ್ ಕುಮಾರ್(22)ನನ್ನು ಬಂಧಿಸಲಾಗಿದೆ.
ಆರೋಪಿ ಗೋವಿಂದ್ ಶರ್ಮಾ ಲೋನಿಯ ದೇವಾಲಯವೊಂದರ ಬಳಿ ಹಲವು ವರ್ಷಗಳಿಂದ ಹೂ ಮಾರಾಟದ ಅಂಗಡಿ ಹೊಂದಿದ್ದ. ಲಾಕ್‌ಡೌನ್‌ಗೂ ಮುಂಚೆ ಆತನ ಅಂಗಡಿಯ ಎದುರಿಗೆ ಅಜಯ್ ತನ್ನ ಹೂವಿನ ಅಂಗಡಿ ತೆರೆದಿದ್ದೇ ಈ ವೈಷಮ್ಯಕ್ಕೆ ಕಾರಣ ಎನ್ನಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
29/12/2020 07:35 pm