ಬೆಂಗಳೂರು: ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ವಿಚಾರ ಇನ್ನೂ ಜನರ ನೆನಪಿಂದ ಮರೆಯಾಗಿಲ್ಲ. ಈ ನಡುವೆ ನಿವೃತ್ತ ಡಿವೈಎಸ್ಪಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಜಯನಗರ ಎಂಸಿ ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿವೃತ್ತ ಡಿವೈಎಸ್‍ಪಿ ಹನುಮಂತಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹನುಮಂತಪ್ಪ ಅವರು ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಹನುಮಂತಪ್ಪ ಮಾಗಡಿ ರಸ್ತೆ, ಬ್ಯಾಟರಾಯನಪುರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ವಿಜಯನಗರ ಪೊಲೀಸ ಠಾಣೆಯಲ್ಲಿ ಆತ್ಮಹತ್ಯೆ ಕುರಿತ ಪ್ರಕರಣ ದಾಖಲಾಗಿದೆ
PublicNext
27/12/2020 05:37 pm