ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಾಯತ್ ಭವನದಲ್ಲಿ ಅಪ್ರಾಪ್ತೆ ಮೇಲೆ ರೇಪ್- ಬರ್ಬರವಾಗಿ ಕೊಲೆಯಾದ ಯುವಕ

ಪಾಟ್ನಾ: ಚಾಕೋಲೆಟ್ ನೀಡುವ ನೆಪದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ಬಿಹಾರ್‌ನ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ.

ಕೈಮೂರ್ ಜಿಲ್ಲೆಯ ಕಬರ್ ಗ್ರಾಮದ ನಿವಾಸಿ ಸಿಪು ಕುಮಾರ್ ಕೊಲೆಯಾದ ಯುವಕ. ಸಿಪು ಕುಮಾರ್ ಟ್ಯಾಪ್ ವಾಟರ್ ಸ್ಕೀಮ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಯು ಬಾಲಕಿಗೆ ಚಾಕೋಲೆಟ್ ಕೊಡಿಸುವ ನೆಪದಲ್ಲಿ ಹತ್ತಿರದ ಪಂಚಾಯತ್ ಭವನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಯುವಕನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಆತ ಮರದ ಮೇಲೆ ಅಡಗಿ ಕುಳಿತಿದ್ದ. ಅವನನ್ನು ಕೆಳಕ್ಕೆ ಇಳಿಸಿದ ಬಾಲಕಿಯ ಚಿಕ್ಕಪ್ಪ ಸೇರಿದಂತೆ ಅನೇಕರು ಕ್ರೂರವಾಗಿ ಕೊಂದು ಹಾಕಿದ್ದಾರೆ.

ಈ ಸಂಬಂಧ ಪೊಲೀಸರು ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡು, ಬಾಲಕಿಯ ಚಿಕ್ಕಪ್ಪನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Edited By : Vijay Kumar
PublicNext

PublicNext

26/12/2020 11:14 am

Cinque Terre

72.06 K

Cinque Terre

5

ಸಂಬಂಧಿತ ಸುದ್ದಿ