ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ 11 ಆ್ಯಪ್​ ಬಳಸಿದ್ರೆ ಕಟ್ಟಬೇಕಾಗುತ್ತೆ ಭಾರೀ ಬಡ್ಡಿ: ಹಗರಣದಲ್ಲಿ ಚೀನಾ ಪ್ರಜೆ ಸೇರಿ ನಾಲ್ವರು ಅರೆಸ್ಟ್

ಹೈದರಾಬಾದ್: ಸಾಲ ನೀಡುವ ಆ್ಯಪ್​​ಗಳ ಮೂಲಕ ವಂಚಿಸಿದ ಹಗರಣ ಸಂಬಂಧ ಚೀನಿ ಪ್ರಜೆಯೊಬ್ಬನ ಸಹಿತ ನಾಲ್ವರನ್ನು ತೆಲಂಗಾಣದ ಸೈಬರಾಬಾದ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಚೀನಿ ಪ್ರಜೆ ಯೀ ಬಾಯ್ ಆಲಿಯಾಸ್ ಡೆನ್ನಿಸ್, ರಾಜಸ್ಥಾನದ ಸತ್ವ ಪಾಲ್ ಖ್ವಲಿಯಾ, ಅನಿರಿಧ್ ಮಲ್ಹೋತ್ರಾ ಮತ್ತು ಆಂಧ್ರ ಪ್ರದೇಶದ ಮುರತೋಟಿ ರಿಚೀ ಹೇಮಂತ್ ಸೇಠ್​ ಬಂಧಿತ ಆರೋಪಿಗಳು. ಸೈಬರಾಬಾದ್​ನ ಸೈಬರ್ ಕ್ರೈಂ ಪೊಲೀಸರು ಕ್ಯುಬೆವೊ ಟೆಕ್ನಾಲಜಿ ಸಂಸ್ಥೆಯ ಕಾಲ್​ಸೆಂಟರ್ ಮೇಲೆ ದಾಳಿ ನಡೆಸಿದಾಗ ಈ ನಾಲ್ವರು ಸಿಕ್ಕಿಬಿದ್ದಿದ್ದಾರೆ.

ಆರೊಪಿಗಳು ಸುಲಭವಾಗಿ ಸಾಲ ನೀಡುವುದಾಗಿ ಆಮಿಷ ತೋರಿಸಿ ಅಪಾರ ಬಡ್ಡಿ ವಿಧಿಸಿ ಜನರನ್ನು ಸುಲಿಗೆ ಮಾಡಲು ಆಪ್​ಗಳನ್ನು ಬಳಸುತ್ತಿದ್ದರು. ಈ ಪ್ರಕರಣದ ಸಂಬಂಧ ಎರಡು ದಿನಗಳ ಹಿಂದ ಹೈದರಾಬಾದ್ ಮತ್ತು ಗುರುಗ್ರಾಮಗಳಲ್ಲಿ 16 ಜನರನ್ನು ಪೊಲೀಸರು ಬಂಧಿಸಿದ್ದರು.

ಅಕ್ರಮ ಲೋನ್ ಆಪ್​ಗಳಿಗೆ ಆರ್​ಬಿಐ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಫಿನ್​ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್​ವೆುಂಟ್ (ಫೇಸ್) ಗ್ರಾಹಕರ ಹಕ್ಕುಗಳು ಮತ್ತು ಹಿತಗಳ ರಕ್ಷಣೆಗಾಗಿ ನೀತಿಸಂಹಿತೆ ರೂಪಿಸಿದೆ. ಇತ್ತ ಪೊಲೀಸರು ಲೋನ್ ಗ್ರಾಂ, ಕ್ಯಾಶ್ ಟ್ರೇನ್, ಕ್ಯಾಶ್ ಬಸ್ , ಎಎಎ ಕ್ಯಾಶ್, ಸೂಪರ್ ಕ್ಯಾಶ್, ಮಿಂಟ್ ಕ್ಯಾಶ್, ಹ್ಯಾಪಿ ಕ್ಯಾಶ್, ಲೋನ್ ಕಾರ್ಡ್, ರೀಪೇ ಒನ್, ಮನಿ ಬಾಕ್ಸ್, ಮಂಕಿ ಬಾಕ್ಸ್ ಆಪ್​ಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ.

Edited By : Vijay Kumar
PublicNext

PublicNext

26/12/2020 10:48 am

Cinque Terre

56.73 K

Cinque Terre

1