ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲಿನ ಮಹಿಳಾ ಮೀಸಲು ಬೋಗಿಯಲ್ಲಿ ಜಡೆ ಜಗಳ; ಬಿಡಿಸಲು ಬಂದ ಲೇಡಿ ಪೊಲೀಸ್​ಗೂ ಥಳಿತ

ಮುಂಬೈ : ಉಪನಗರ​ ರೈಲಿನ ಮಹಿಳಾ ಮೀಸಲು ಬೋಗಿಯು ನಿನ್ನೆ (ಅ.6) ಜಡೆ ಜಗಳಕ್ಕೆ ಸಾಕ್ಷಿಯಾಯಿತು. ಚಲಿಸುವ ರೈಲಿನಲ್ಲೇ ಮಹಿಳಾಮಣಿಗಳು ಕಿತ್ತಾಡಿಕೊಂಡರು. ಈ ವೇಳೆ ಕರ್ತವ್ಯದಲ್ಲಿದ್ದ ಓರ್ಬ ಮಹಿಳಾ ಪೊಲೀಸ್​ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥಾಣೆ-ಪನ್ವೆಲ್ ಸ್ಥಳೀಯ ರೈಲಿನ ಮಹಿಳಾ ಬೋಗಿಯಲ್ಲಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.

ಈ ಬಗ್ಗೆ ವಾಶಿ ಸರ್ಕಾರಿ ರೈಲ್ವೆ ಪೊಲೀಸ್​ (ಜಿಆರ್​ಪಿ) ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​ ಸಂಭಾಜಿ ಕಾಟರೆ ಮಾತನಾಡಿದ್ದು, ತುರ್ಭೆ ನಿಲ್ದಾಣ ಸಮೀಪ ಸೀಟಿಗಾಗಿ ಮೂವರು ಮಹಿಳೆಯರ ನಡುವೆ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ ಜಗಳ ನಡೆಯಿತು. ಈ ವೇಳೆ ಮತ್ತಷ್ಟು ಮಹಿಳೆಯರು ತಮ್ಮವರಿಗೆ ಬೆಂಬಲಿಸಲು ಹೋಗಿ ಜಗಳವನ್ನು ದೊಡ್ಡದು ಮಾಡಿದರು ಎಂದು ಮಾಹಿತಿ ನೀಡಿದರು.

ಗಲಾಟೆ ಸಮಯದಲ್ಲಿ ಓರ್ವ ಮಹಿಳಾ ಪೊಲೀಸ್​ ಸಿಬ್ಬಂದಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಆದರೆ, ಕೆಲ ಮಹಿಳೆಯರು ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿದ್ದು, ಪರಿಣಾಮ ಅವರು ಗಾಯಗೊಂಡರು.

ಅಲ್ಲದೆ, ಮೂವರು ಮಹಿಳೆಯರಿಗೂ ಗಾಯಗಳಾಗಿವೆ. ಓರ್ವ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಯಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್​ಪೆಕ್ಟರ್​ ಸಂಭಾಜಿ ಕಾಟರೆ ತಿಳಿಸಿದರು.

Edited By : Abhishek Kamoji
PublicNext

PublicNext

07/10/2022 11:46 am

Cinque Terre

75.98 K

Cinque Terre

1

ಸಂಬಂಧಿತ ಸುದ್ದಿ