ಬೆಂಗಳೂರು ಗ್ರಾಮಾಂತರ : ಇಂದು ನಡೆಯುತ್ತಿದ್ದ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಲಿಖಿತ ಪರೀಕ್ಷೆಗೆ ಅಭ್ಯರ್ಥಿಯ ಬದಲಾಗಿ ಮತ್ತೋರ್ವ ವ್ಯಕ್ತಿ ಪರೀಕ್ಷಗೆ ಹಾಜರಾಗಿ ಸದ್ಯ ಖಾಕಿ ಅತಿಥಿಯಾಗಿದ್ದಾನೆ.
ಆದ್ರೆ ಹೀಗೆ ಅಭ್ಯರ್ಥಿ ಬದಲಿಗೆ ಬೇರೊಬ್ಬ ಬರಲು ಉಪಯೋಗಿಸಿದ ಐಡಿಯಾ ಯಾವುದು ಗೋತ್ತೇ?
ಅದೇ ಕೋವಿಡ್ ರಕ್ಷಾಕವಚ ಮಾಸ್ಕ್ ಕಣ್ರೀ ಹೌದು.
ಜಿಲ್ಲೆಯ ನೆಲಮಂಗಲ ತಾಲೂಕಿನ ಗಣೇಶನಗುಡಿ ಗ್ರಾಮದ ಬಳಿ ಇರುವ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ನಡೆಯಿತು.
ಈ ವೇಳೆ ಪರೀಕ್ಷಾ ಅಭ್ಯರ್ಥಿಯಾದ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ನಿವಾಸಿ ಮಂಜುನಾಥ್ (21) ಬದಲು ಆತನ ಹೆಸರಿನಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತೇರನಹಳ್ಳಿ ನಿವಾಸಿ ಶಿವಪ್ರಸಾದ್ (28) ಪರೀಕ್ಷೆ ಬರೆಯಲು ಬಂದಿದ್ದಾ.
ಪರೀಕ್ಷಾ ಕೊಠಡಿಗೆ ಭೇಟಿಕೊಟ್ಟ ಸರ್ಕಲ್ ಇನ್ ಸ್ಪೆಕ್ಟರ್ ಶಿವಣ್ಣ ಹಾಗೂ ಹೆಚ್ಚುವರಿ SP ಲಕ್ಷ್ಮಿ ಗಣೇಶ್ ಪರಿಶೀಲನೆ ನಡೆಸಿದಾಗ ಈ ಗುಟ್ಟು ರಚ್ಚಾಗಿದೆ.
ಘಟನೆಗೆ ಸಂಬಂಧಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
20/09/2020 03:16 pm