ಬೆಳಗಾವಿ: ಅಲ್ ಖೈದಾ ಸಂಘಟನೆಯನ್ನು ನಿಷೇಧಿಸಿದ ಮೇಲೆಯೂ ಅದರ ಭಯೋತ್ಪಾದಕ ಝವಾಹಿರಿಯ ಹೇಳಿಕೆ ಹೇಗೆ ವೈರಲ್ ಆಯಿತು? ಒಬ್ಬ ಭಯೋತ್ಪಾದಕ ಕರ್ನಾಟಕದ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹೊಗಳಿದ್ದಾನೆ. ಈ ಎಲ್ಲ ಬೆಳವಣಿಗೆಗೆಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮುಸ್ಕಾನ್ ಮತ್ತು ಆಕೆಯ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಲ್‌ಖೈದಾ ಝವಾಹಿರಿಗೆ ಭಾರತದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಮ್ಮ ದೇಶ ತಾಲಿಬಾನ್ ಅಲ್ಲ. ಕುರಾನ್ ಮೇಲೆ ನಮ್ಮ ದೇಶ ನಡೆಯುತ್ತಿಲ್ಲ. ಮುಸ್ಕಾನ್ ಹೊಗಳುವ ಅವಶ್ಯಕತೆ ಇಲ್ಲ. ಅಲ್‌ಖೈದಾ ಜವಹರಿ ಮುಸ್ಕಾನ್ ಹೊಗಳಿದ್ದು ಅತ್ಯಂತ ಖಂಡನೀಯವಾದದ್ದು. ಆತನ ವಿಡಿಯೋ ಎಲ್ಲಿಂದ ಬಂತು? ಹೇಗೆ ಬಂತು? ಕರ್ನಾಟಕದ ಮಂಡ್ಯ ಮೂಲದ ಮುಸ್ಕಾನ್‌ವರೆಗೂ ಬರಲು ಹೇಗೆ ಸಾಧ್ಯ? ಎಂಬೆಲ್ಲದರ ಬಗ್ಗೆ ಸರ್ಕಾರ ಗಂಭೀರ ತನಿಖೆಗೆ ಆದೇಶ ಕೊಡಬೇಕು. ಮಹಾರಾಷ್ಟ್ರದ ಮುಸ್ಲಿಂ ಎಂಎಲ್‌ಎ ಬಂದು ಅವರಿಗೆ ಮೊಬೈಲ್ ಕೊಟ್ಟು ಹೋಗಿದ್ದಾರೆ. ಆ ಮೊಬೈಲ್ ಎಲ್ಲಿಂದ ಬಂತು ಎಂಬುದನ್ನು ತಿಳಿಯಬೇಕು. ತಕ್ಷಣ ಅದನ್ನು ಸೀಜ್ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
PublicNext
08/04/2022 04:49 pm