ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಜೀವಭಯ ಬಿಟ್ಟು ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಆರಕ್ಷಕರು

ಪುಣೆ: ಪ್ರವಾಹದಲ್ಲಿ ಸಿಲುಕಿ ಇನ್ನೇನು ಕೊಚ್ಚಿ ಹೋಗಿಯೇ ಎಂಬಷ್ಟರಲ್ಲಿ ಆರಕ್ಷಕರು ಪ್ರಾಣ ಉಳಿಸಿದ್ದಾರೆ.

ನೀರಿನ ರಭಸದೊಂದಿಗೆ ಮನುಷ್ಯರಾದ ನಾವು ಏನೇನೂ ಅಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಪ್ರವಾಹದ ನೀರಿನಲ್ಲಿ ದಡ ತಲುಪುವ ಅರ್ಥಹೀನ ಸಾಹಸಕ್ಕೆ ಕೆಲವರು ಕೈ ಹಾಕ್ತಾರೆ. ಮಹಾರಾಷ್ಟ್ರದ ಪುಣೆಯ ದತ್ತವಾಡಿ ಸಮೀಪದ ಶಿವನೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡ ಇಬ್ಬರು ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ನೀರಿಗೆ ಧುಮುಕಿ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ, ಪೊಲೀಸ್ ಸಿಬ್ಬಂದಿಯಾದ ಸದ್ದಾಂ ಶೇಖ್ ಹಾಗೂ ಅಜಿತ್ ಪೋಕರೆ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

10/07/2022 07:46 pm

Cinque Terre

151.75 K

Cinque Terre

1