ಲಕ್ನೋ: 14 ವರ್ಷದ ಅಪ್ರಾಪ್ತ ಗರ್ಭಿಣಿಯನ್ನು ಆಕೆಯ ತಂದೆ ಹಾಗೂ ಅಣ್ಣ ಸೇರಿ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ತಲೆಕಡಿಯಪ್ಪಟ್ಟಿ ಬಾಲಕಿಯ ಮೃತದೇಹವು ದುಲ್ಹಾಪುರ್ ಗ್ರಾಮದ ಸಿಧೌಲಿ ಪ್ರದೇಶದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಗರ್ಭಿಣಿಯಾಗಲು ಕಾರಣ ಯಾರು ಎಂಬುದನ್ನು ಹೇಳಲು ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ತಿಳಿಸಿದ್ದಾರೆ.
ಸೆಪ್ಟೆಂಬರ್ 24ರಂದು ಬಾಲಕಿಯ ತಂದೆ ಹಾಗೂ ಅಣ್ಣ ಸೇರಿ ಕೃತ್ಯ ಎಸೆಗಿದ್ದಾರೆ. ಬಳಿಕ ಅಪ್ರಾಪ್ತೆಯ ತಲೆ ಹಾಗೂ ದೇಹವನ್ನು ಸಮೀಪದ ಚರಂಡಿಗೆ ಎಸೆದಿದ್ದರು. ಆರೋಪಿಗಳ ಪೈಕಿ ಬಾಲಕಿಯ ಸಹೋದರ ಪರಾರಿಯಾಗಿದ್ದು, ತಂದೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
PublicNext
07/10/2020 04:14 pm