ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಅಂಗಡಿ ಮುಂದೆ ಬ್ಯಾನರ್ ಹಾಕಿದ್ದನ್ನು ಪ್ರಶ್ನಿಸಿದ ವೃದ್ಧೆ ಮೇಲೆ ಹಲ್ಲೆ

ಮುಂಬೈ: ಅಂಗಡಿ ಮುಂದೆ ಬ್ಯಾನರ್ ಕಟ್ಟಲು ಬಿದಿರು ಹಾಕಲಾಗಿತ್ತು‌. ನನ್ನ ಅಂಗಡಿ ಮುಂದೆ ಇದೆಲ್ಲ ಯಾಕೆ ಹಾಕಿದ್ದು ಎಂದು ಪ್ರಶ್ನೆ ಮಾಡಿದ ವೃದ್ಧೆ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.

ಮುಂಬೈ ಮಹಾನಗರದ ನಾಗಪದ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮಾಟಿಪುರದಲ್ಲಿ ಆಗಸ್ಟ್ 28ರಂದು ಈ ಘಟನೆ ನಡೆದಿದೆ. ಹಲ್ಲೆಗೈದ ವ್ಯಕ್ತಿ ಜಾಹೀರಾತು ಫಲಕ ಹಾಕಲು ಬಿದಿರಿನ ಕಟ್ಟಿಗೆಯನ್ನು ವೃದ್ಧೆಯ ಅಂಗಡಿ ಮುಂದೆ ಇರಿಸಿದ್ದಾನೆ. ಇದನ್ನು ಪ್ರಶ್ನಿಸಿದ ಅಂಗಡಿಯ ಒಡತಿಯ ಕಪಾಳಕ್ಕೆ ಬಾರಿಸಿದ್ದಾನೆ. ಹಾಗೂ ತೀರಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲವು ಬಾರಿ ನೆಲಕ್ಕೆ ನೂಕಿದ್ದಾನೆ. ಇದರಿಂದ ವೃದ್ಧೆ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ.

ಹಲ್ಲೆಗೈದ ವ್ಯಕ್ತಿ ಮೇಲೆ ನಾಗಪದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

01/09/2022 06:13 pm

Cinque Terre

70.3 K

Cinque Terre

1

ಸಂಬಂಧಿತ ಸುದ್ದಿ