ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಶವ ಪತ್ತೆ: ವ್ಯಕ್ತಿ ಸಾವಿನ ಹಿಂದೆ ಹಲವು ಅನುಮಾನ

ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಹಾಗೂ ಪೇಠಾಲೂರು ಗ್ರಾಮಗಳ ಮಧ್ಯದ ರಸ್ತೆ ಮೇಲೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಯಾರು ಹತ್ಯೆ ಮಾಡಿ ಶವ ಬಿಸಾಡಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮೃತ ಯುವಕ ಗದಗ ನಗರದ ಗಂಗಿಮಡಿ ಬಡಾವಣೆ ನಿವಾಸಿ ಮಾರುತಿ ಅಂಕಲಗಿ (26) ಅಂತಾ ಗುರುತಿಸಲಾಗಿದೆ. ಆರ್‌ಟಿಒ ಕಚೇರಿಯಲ್ಲಿ ಏಜೆಂಟ್ ಆಗಿದ್ದ ವ್ಯಕ್ತಿ ನಿನ್ನೆ ರಾತ್ರಿ ಜಂತ್ಲಿ‌ ಶಿರೂರುಗೆ ಹೋಗಿದ್ದ. ಅಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದ.

ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಮಾರುತಿ ಹೆಣ ಪತ್ತೆಯಾಗಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಸಿಪಿಐ ವಿರೇಶ್ ಹಳ್ಳಿ ಆ್ಯಂಡ್ ಟೀಮ್‌ಗೆ ಅದಾಗ್ಲೆ ಇಲ್ಲಿ ಮರ್ಡರ್ ನಡೆದಿರೋ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಕೇಸ್ ದಾಖಲಿಸಿ ತನಿಖೆ ನಡೆಸೋದಕ್ಕೆ ಪೊಲೀಸರು ಮುಂದಾಗಿದಾರೆ.

ರಸ್ತೆ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಆ್ಯಕ್ಸಿಡೆಂಟ್ ಅಂತಾ ಹೇಳಲಾಗ್ತಿತ್ತು. ಆದ್ರೆ ದೇಹ ಬಿದ್ದಿರುವ ಸ್ಥಿತಿ, ಚಪ್ಪಲಿಗೆ ಮೆತ್ತಿಕೊಂಡಿದ್ದ ರಾಡಿಯಿಂದ, ಯಾರೋ ಅಟ್ಟಿಸಿಕೊಂಡು ಬಂದು ಹತ್ಯೆ ಮಾಡಿದ್ದಾರೆ ಅನ್ನೋದು ಕುಟುಂಬಸ್ಥರ ಅನುಮಾನವಾಗಿದೆ. ಹೀಗಾಗಿ ರಾಮಣ್ಣ ಅಂಕಲಗಿ ಅವರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮಗ ಮಾರುತಿಯ ಹತ್ಯೆ ಮಾಡಲಾಗಿದೆ ಅಂತಾ ಅನುಮಾನ ವ್ಯಕ್ತ ಪಡಿಸಿ ದೂರು ನೀಡಿದಾರೆ.

ನರಸಾಪುರದಲ್ಲಿರೋ ಅಕ್ಕ ರೇಣುಕಾ ಅವರ ಮನೆಗೆ ಸೋಮವಾರ ಹೋಗಿದ್ದ ಮಾರುತಿ ನಂತ್ರ ಕಂಡಿದ್ದು ಶವವಾಗಿ, ಅಲ್ಲಿಂದ ಕೆಲಸದ ಮೇಲೆ ಊರಿಗೆ ಹೋಗ್ತೇನೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದ. ಹಬ್ಬಕ್ಕೆ ತವರು ಮನೆಗೆ ಹೋಗಿದ್ದ ಹೆಂಡತಿಗೆ ದಿನ ನಿತ್ಯ ಸಂಜೆ ಮಾರುತಿ ಫೋನ್ ಮಾಡ್ತಿದ್ದ. ಆದ್ರೆ ನಿನ್ನೆ (ಬುಧವಾರ) ಫೋನ್ ಬಂದಿರಲಿಲ್ಲ. ವಾಪಾಸ್ ಫೋನ್ ಮಾಡಿದ್ರೆ ನಾಟ್ ರೀಚೆಬಲ್ ಇತ್ತಂತೆ. ರಾತ್ರಿವೇಳೆಗೆ ಮಾರುತಿ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬಂದಿದೆ.

ಆರ್‌ಟಿಒ ಏಜೆಂಟ್ ಆಗಿದ್ದ ಮಾರುತಿ ಲೈಸನ್ಸ್ ಮಾಡಿಸಿ ಕೊಡೋದಕ್ಕೆ ಅಂತಾ ಊರು ಊರು ಅಡ್ಡಾಡ್ತಿದ್ದ. ಕುಡಿತವೂ ಮಾರುತಿಯ ವೀಕ್‌ನೆಸ್ ಆಗಿತ್ತು. ಆಗಾಗ ಸ್ನೇಹಿತರೊಂದಿಗೆ ಪಾರ್ಟಿ ಅಂತೆಲ್ಲ ಹೋಗ್ತಿದ್ದ ಮಾರುತಿ ನಿನ್ನೆಯೂ ಹಾಗೇ ಹೋಗಿರಬಹುದು ಅಂತಾ ಕುಟುಂಬಸ್ಥರು ಅನ್ಕೊಂಡಿದ್ರು. ಆದ್ರೆ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದನ್ನ ನೋಡಿದ್ರೆ, ಕೊಲೆ ಮಾಡಿದ್ದು ಪಕ್ಕಾ, ಗೊಂದಲ ಮೂಡಿಸಿದ ಕೇಸ್ ಗೆ ಪೊಲೀಸರು ಸ್ಪಷ್ಟತೆ ಕೊಡ್ಬೇಕು ಅಂತಾ ಮಾರುತಿ ಕುಟುಂಬಸ್ಥರು ಆಗ್ರಹಿಸ್ತಿದ್ದಾರೆ.

Edited By :
PublicNext

PublicNext

26/08/2022 10:11 am

Cinque Terre

66.55 K

Cinque Terre

0

ಸಂಬಂಧಿತ ಸುದ್ದಿ