ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿಯೋರ್ವ ಲಂಚಕ್ಕಾಗಿ ಲಾರಿ ಡ್ರೈವರ್‌ಗೆ ಬೆದರಿಕೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಾರ್ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಪಾಲಾರ್ ಚೆಕ್ಪೋಸ್ಟ್ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೇ ವೇಳೆ ಮಲೈಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಮೋಹನ್ ಲಾರಿ ಒಂದನ್ನು ಅಡ್ಡಗಟ್ಟಿ 100 ರೂ. ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಲಾರಿ ಚಾಲಕ ಈಗಾಗಲೇ 30 ರೂ. ಕೊಟ್ಟಿದ್ದಾಗಿ ಹೇಳಿದರೂ ಮೋಹನ್ ಮಾತ್ರ ಲಾರಿ ಚಾಲಕ ಹಾಗೂ ಲಾರಿಯಲ್ಲಿದ್ದ ವ್ಯಕ್ತಿಗೆ ಅವಾಜ್ ಹಾಕುತ್ತಲೇ ಇರುತ್ತಾನೆ. ನಿಮ್ಮ ಮೇಲೆ ಫೈರಿಂಗ್ ಮಾಡುತ್ತೇನೆ, ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ನಿಮ್ಮನ್ನ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.
ಅರಣ್ಯ ಸಿಬ್ಬಂದಿ ಮೋಹನ್ ರಂಪಾಟ ದೃಶ್ಯವನ್ನು ಚಾಲಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
PublicNext
16/08/2022 12:10 pm